India-Pakistan War Updates; ಪಾಕಿಸ್ತಾನದಿಂದ ನಿರಂತರ ಶೆಲ್ಲಿಂಗ್, ಪಂಜಾಬ್ ಗಡಿಭಾಗಕ್ಕಿರುವ ಗ್ರಾಮಗಳ ಜನ ಬೇರೆ ಊರುಗಳಿಗೆ ಸ್ಥಳಾಂತರ

Updated on: May 10, 2025 | 6:43 PM

ಗ್ರಾಮವೊಂದರ ನಿವಾಸಿಯೊಬ್ಬರು ಪತ್ನಿ ಹಾಗೂ ತಮ್ಮ ಚಿಕ್ಕ ಮಕ್ಕಕೊಂದಿಗೆ ದ್ವಿಚಕ್ರವಾಹನದಲ್ಲಿ ಬೇರೆ ಊರಿಗೆ ಹೋಗುತ್ತಿದ್ದಾರೆ. ಗಡಿಭಾಗದಲ್ಲಿ ಪರಿಸ್ಥಿತಿ ದಿನದಿಂಮ ದಿನಕ್ಕೆಕ ಬಿಗಡಾಯಿಸುತ್ತಿದೆ, ಇಡೀ ಊರಿನ ಜನ ಸ್ಥಳ ಖಾಲಿಮಾಡಿ ಬೇರೆ ಊರುಗಳಿಗೆ ಹೋಗಿದ್ದಾರೆ, ಕೆಲದಿನಗಳ ಮಟ್ಟಿಗೆ ಸಂಬಂಧಿಕರ ಮನೆಯಲ್ಲಿದ್ದು ಇಲ್ಲಿನ ಪರಿಸ್ಥಿತಿ ತಿಳಿಗೊಂಡ ಬಳಿಕ ಬರುತ್ತೇವೆ ಎಂದು ಅವರು ಹೇಳುತ್ತಾರೆ.

ಪಂಜಾಬ್, ಮೇ 10: ಪಾಕಿಸ್ತಾನದ ಗಡಿಗೆ ಹತ್ತಿರವಿರುವ ಪಂಜಾಬ್ ರಾಜ್ಯದ ಕೆಲ ಊರುಗಳ ಜನರು ಶತ್ರುಸೇನೆಯು ಶೆಲ್ಲಿಂಗ್ ಮತ್ತು ಗುಂಡಿನ ದಾಳಿಯನ್ನು ತೀವ್ರಗೊಳಿಸುತ್ತಿರುವುದರಿಂದ ತಮ್ಮ ಹಾಗೂ ಮಕ್ಕಳ ಸುರಕ್ಷತೆಗಾಗಿ ಬೇರೆ ಊರುಗಳಿಗೆ ಶಿಫ್ಟ್ ಆಗುತ್ತಿದ್ದಾರೆ. ಟ್ರ್ಯಾಕ್ಟರ್, ಮಿನಿ ಟ್ರಕ್, ಗೂಡ್ಸ್​ ಕ್ಯಾರಿಯರ್ ಗಳಲ್ಲಿ ಜನ ತಮ್ಮ ಸಾಮಾನು ಸರಂಜಾಮುಗಳನ್ನು ಹೇರಿಕೊಂಡು ಹೋಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಭಾರತದ ಸೇನೆಯೊಂದಿಗೆ ಯುದ್ಧ ಮಾಡುವ ಬದಲು ಪಾಕಿಸ್ತಾನದ ಸೇನೆ ಮತ್ತು ಪಾಕ್ ಬೆಂಬಲಿತ ಉಗ್ರರು ಜನ ವಸತಿ ಪ್ರದೇಶಗಳ ಮೇಲೆ ದಾಳಿ ಮಾಡುತ್ತಿರುವುದರಿಂದ ಜನ ಸುರಕ್ಷಿತ ಸ್ಥಳಗಳಿಗೆ ಹೋಗುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ:   Operation Sindoor: ಪಾಕ್ ಪ್ರಧಾನಿ ಶೆಹಬಾಜ್, ಸೇನಾ ಮುಖ್ಯಸ್ಥ ಮುನೀರ್ ಮನೆ ಬಳಿ ಸ್ಫೋಟ?

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 10, 2025 06:04 PM