‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
Pushpa 2: ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ. ಕರ್ನಾಟಕದಲ್ಲಿಯೂ ಸಹ ‘ಪುಷ್ಪ 2’ ಸಿನಿಮಾ ಬಿಡುಗಡೆ ಜೋರಾಗಿದೆ. ಕರ್ನಾಟಕದಲ್ಲಿ ಸಿನಿಮಾ ವಿತರಣೆ ಮಾಡಿರುವ ಲಕ್ಷ್ಮಿಕಾಂತ್ ಪುಷ್ಪ 2 ಸಿನಿಮಾದ ಕಲೆಕ್ಷನ್ ನಿರೀಕ್ಷೆ ಬಗ್ಗೆ ಮಾತನಾಡಿದ್ದಾರೆ.
‘ಪುಷ್ಪ 2’ ಸಿನಿಮಾ ನಾಳೆ (ಡಿಸೆಂಬರ್ 05) ಬಿಡುಗಡೆ ಆಗಲಿದೆ. ಬೆಂಗಳೂರು ಸೇರಿದಂತೆ ಹಲವು ಕಡೆ ಇಂದು (ಡಿಸೆಂಬರ್ 04) ರಾತ್ರಿಯಿಂದಲೇ ವಿಶೇಷ ಶೋಗಳು ಪ್ರದರ್ಶನಗೊಳ್ಳಲಿವೆ. ಕರ್ನಾಟಕದಲ್ಲಿಯೂ ಸಹ ‘ಪುಷ್ಪ 2’ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ. ‘ಪುಷ್ಪ 2’ ಸಿನಿಮಾ ಅನ್ನು ಕರ್ನಾಟಕದಲ್ಲಿ ಲಕ್ಷ್ಮಿಕಾಂತ್ ವಿತರಣೆ ಮಾಡುತ್ತಿದ್ದಾರೆ. ಈ ಬಾರಿ ಬೆಂಗಳೂರಿನಲ್ಲಿ ‘ಪುಷ್ಪ 2’ ಸಿನಿಮಾದ ಕನ್ನಡ ಆವೃತ್ತಿಯನ್ನು ಹೆಚ್ಚು ಬಿಡುಗಡೆ ಮಾಡಲಾಗುತ್ತಿದೆ. ಪ್ರತಿ ಮಲ್ಟಿಪ್ಲೆಕ್ಸ್ನಲ್ಲಿಯೂ ಕನ್ನಡದ ಶೋಗಳು ಕಡ್ಡಾಯವಾಗಿ ಪ್ರದರ್ಶನವಾಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದಿರುವ ಲಕ್ಷ್ಮಿಕಾಂತ್, ಮೊದಲ ದಿನ ‘ಪುಷ್ಪ 2’ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬ ಲೆಕ್ಕ ಸಹ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos