ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು

|

Updated on: Nov 15, 2024 | 9:17 PM

ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಇಚ್ಚಾಪುರಂ ಮಂಡಲದ ಡೊಂಕೂರು ಗ್ರಾಮದಲ್ಲಿ ಭಾರೀ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ಸಂಚಲನ ಮೂಡಿಸಿದೆ. ಈ ಗ್ರಾಮದ ಕೃಷಿಕರೊಬ್ಬರು ಕಾಡು ಹಂದಿಗಳಿಂದ ಜಮೀನನ್ನು ರಕ್ಷಿಸಲು ಬಲೆ ಹಾಕಿದ್ದರು. ಗುರುವಾರ ರಾತ್ರಿ ಈ ಬಲೆಯಲ್ಲಿ ಭಾರಿ ಗಾತ್ರದ ಹೆಬ್ಬಾವು ಸಿಕ್ಕಿಬಿದ್ದಿದೆ.

ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಇಚ್ಚಾಪುರಂ ಮಂಡಲದ ಡೊಂಕೂರು ಗ್ರಾಮದಲ್ಲಿ ಭಾರೀ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ಸಂಚಲನ ಮೂಡಿಸಿದೆ. ಈ ಗ್ರಾಮದ ಕೃಷಿಕರೊಬ್ಬರು ಕಾಡು ಹಂದಿಗಳಿಂದ ಜಮೀನನ್ನು ರಕ್ಷಿಸಲು ಬಲೆ ಹಾಕಿದ್ದರು. ಗುರುವಾರ ರಾತ್ರಿ ಈ ಬಲೆಯಲ್ಲಿ ಭಾರಿ ಗಾತ್ರದ ಹೆಬ್ಬಾವು ಸಿಕ್ಕಿಬಿದ್ದಿದೆ. ಬೆಳಗ್ಗೆ ಜಮೀನಿಗೆ ಬಂದಿದ್ದ ರೈತರು ಬೃಹತ್ ಹೆಬ್ಬಾವು ಬಲೆಯಲ್ಲಿ ಸಿಲುಕಿದ್ದನ್ನು ಕಂಡು ಗಾಬರಿಗೊಂಡರು. ಈ ಹೆಬ್ಬಾವು ಸುಮಾರು 6 ಅಡಿ ಉದ್ದವಿತ್ತು. ನಂತರ ಇದನ್ನು ಬಲೆಯಿಂದ ಬಿಡಿಸಿ ಕಾಡಿಗೆ ಬಿಡಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ