ಶಿಗ್ಗಾವಿ ಕಾರ್ಯಕರ್ತರಲ್ಲಿ ಭಿನ್ನಮತವಿಲ್ಲ, ಖಾದ್ರಿ ಖುದ್ದು ನನ್ನೊಂದಿಗೆ ಮಾತಾಡಿದ್ದಾರೆ: ಶಿವಕುಮಾರ್
ಚನ್ನಪಟ್ಟಣದದಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಿರುವುದರಿಂದ ಕಾಂಗ್ರೆಸ್ ಗೆಲುವಿನ ಅವಕಾಶಗಳ ಮೇಲೆ ಪ್ರಭಾವ ಬೀರಲಿದೆಯೇ ಅಂತ ನಮ್ಮ ವರದಿಗಾರ ಕೇಳಿದಾಗ, ಸ್ಪಷ್ಟವಾಗಿ ಉತ್ತರ ನೀಡದ ಶಿವಕುಮಾರ್ ಅವರನ್ನು ಸ್ಪರ್ಧಿಸಬೇಡ ಅನ್ನೋದಿಕ್ಕಾಗುತ್ತೆಯೇ? ಅವರ ಪಾಡು ಅವರ ಜೊತೆ ಅಂತ ಹೇಳಿದರು.
ಬೆಂಗಳೂರು: ಶಿಗ್ಗಾವಿಯಲ್ಲಿ ಅಜ್ಜಂಪೀರ್ ಖಾದ್ರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿಲ್ಲ, ಯಾರೋ ಬೆಂಬಲಿಗರು ಅವರ ಪರವಾಗಿ ನಾಮಪತ್ರ ಸಲ್ಲಿಸಿದ್ದಾರಂತೆ, ಖುದ್ದು ಖಾದ್ರಿ ತನ್ನೊಂದಿಗೆ ಮಾತಾಡಿದ್ದಾರೆ, ಅಲ್ಲೇನೂ ಭಿನ್ನಮತವಿಲ್ಲ, ಯಾವುದೇ ಕಾರ್ಯಕರ್ತ ಬಂಡಾಯವೆದ್ದಿಲ್ಲ, ಎಲ್ಲರೂ ಜೊತೆಗೂಡಿ ಕೆಲಸ ಮಾಡುತ್ತಾರೆ ಮತ್ತು ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರನ್ನು ಗೆಲ್ಲಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶಿಗ್ಗಾವಿ ಟಿಕೆಟ್ ಗಿಟ್ಟಿಸಿರುವ ಯಾಸಿರ್ ಪಠಾಣ್ ಒಬ್ಬ ರೌಡಿಶೀಟರ್: ಅಜ್ಜಂಪೀರ್ ಖಾದ್ರಿ