ಮುಸ್ಲಿಂ ಮೀಸಲಾತಿ ಬಗ್ಗೆ ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರಿಸಿದರಾದರೂ ಸಿಡಿಮಿಡಿಗೊಂಡು ಸುದ್ದಿಗೋಷ್ಟಿಯಿಂದ ಎದ್ದುಬಿಟ್ಟರು!

|

Updated on: Apr 25, 2024 | 2:32 PM

ವಿಷಯದ ಹಿಂದೆ ಮುಂದೆ ಅರಿಯದೆ ಪ್ರಶ್ನೆಗಳನ್ನು ಯಾಕೆ ಕೇಳುತ್ತೀರಿ ಅಂತ ಕೋಪದಲ್ಲಿ ಹೇಳಿದ ಅವರು, ಬೊಮ್ಮಾಯಿ ಸರಕಾರವು ಮುಸಲ್ಮಾನರ ಮೀಸಲಾತಿಯನ್ನು ರದ್ದು ಮಾಡಲ್ಲ ಎಂದು ನ್ಯಾಯಲಯಕ್ಕೆ ಮುಚ್ಚಳಿಕೆ ಬರೆದುಕೊಟ್ಟಿತ್ತು ಎಂದು ಹೇಳಿ ಮಾಧ್ಯಮದ ಪ್ರತಿನಿಧಿಗಳು ಸಾರ್ ಸಾರ್ ಎಂದು ಬೇರೆ ಪ್ರಶ್ನೆ ಕೇಳುತ್ತಿದ್ದರೂ ಸಾಕು ನಿಮ್ಮ ಪ್ರಶ್ನೆಗಳು ಅನ್ನುತ್ತಾ ಅಲ್ಲಿಂದ ಎದ್ದರು.

ಬೀದರ್: ಮಾಧ್ಯಮಗಳ ಮೇಲೆ ರೇಗುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಆಗಾಗ ಮಾಡುತ್ತಿರುತ್ತಾರೆ, ಅಂಥದೊಂದು ಘಟನೆ ಇಂದು ಬೀದರ್ ನಲ್ಲಿ ನಡೆಯಿತು. ಸಚಿವ ಈಶ್ವರ್ ಖಂಡ್ರೆ (Eshwar Khandre) ಜೊತೆ ಸುದ್ದಿಗೋಷ್ಟಿ ನಡೆಸುತ್ತಿದ್ದ ಸಿದ್ದರಾಮಯ್ಯನವರಿಗೆ ಅವರ ಸರ್ಕಾರ ಮುಸಲ್ಮಾನರಿಗೆ ಮೀಸಲಾತಿ (Muslim reservation) ಹೆಚ್ಚಿಸಲು ನಿರ್ಧರಿಸಿರುವ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಅವರ ಸಿಡಿಮಿಡಿಗೊಂಡರು. 1994 ರಲ್ಲಿ ಚಿನ್ನಪ್ಪ ರೆಡ್ಡಿ ಅಯೋಗ ನೀಡಿದ ವರದಿಯ ಪ್ರಕಾರ ಮುಸ್ಲಿಂ ಸಮುದಾಯದವರಿಗೆ 4 ಪರ್ಸೆಂಟ್ ಮೀಸಲಾತಿ ನೀಡಲಾಗುತ್ತಿತ್ತು. ಆದರೆ ಬಸವರಾಜ ಬೊಮ್ಮಯಿ ಸರ್ಕಾರ ಅದನ್ನು ತೆಗೆದುಹಾಕಿತ್ತು. ಪ್ರಕರಣ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದಾಗ ಬಿಜೆಪಿ ಸರ್ಕಾರ ಕೋರ್ಟ್ ಗೆ ಏನು ಹೇಳಿತ್ತು ನಿಮಗೆ ಗೊತ್ತಾ? ಅಂತ ಪ್ರಶ್ನೆ ಕೇಳಿದ ಪತ್ರಕರ್ತನನ್ನು ಪ್ರಶ್ನಿಸಿದರು. ಅವರಿಂದ ಉತ್ತರ ಬಾರದೆ ಹೋದಾಗ ಸಿದ್ದರಾಮಯ್ಯನವರಿಗೆ ರೇಗಿತು. ವಿಷಯದ ಹಿಂದೆ ಮುಂದೆ ಅರಿಯದೆ ಪ್ರಶ್ನೆಗಳನ್ನು ಯಾಕೆ ಕೇಳುತ್ತೀರಿ ಅಂತ ಕೋಪದಲ್ಲಿ ಹೇಳಿದ ಅವರು, ಬೊಮ್ಮಾಯಿ ಸರಕಾರವು ಮುಸಲ್ಮಾನರ ಮೀಸಲಾತಿಯನ್ನು ರದ್ದು ಮಾಡಲ್ಲ ಎಂದು ನ್ಯಾಯಲಯಕ್ಕೆ ಮುಚ್ಚಳಿಕೆ ಬರೆದುಕೊಟ್ಟಿತ್ತು ಎಂದು ಹೇಳಿ ಮಾಧ್ಯಮದ ಪ್ರತಿನಿಧಿಗಳು ಸಾರ್ ಸಾರ್ ಎಂದು ಬೇರೆ ಪ್ರಶ್ನೆ ಕೇಳುತ್ತಿದ್ದರೂ ಸಾಕು ನಿಮ್ಮ ಪ್ರಶ್ನೆಗಳು ಅನ್ನುತ್ತಾ ಅಲ್ಲಿಂದ ಎದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಂಗಳೂರಲ್ಲಿ ಕುಕ್ಕರ್ ಬ್ಲಾಸ್ಟ್ ನಡೆದಾಗ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿತ್ತು? ಸಿದ್ದರಾಮಯ್ಯ