AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lok Sabha Elections: ಮೊದಲು ಮತದಾನ ಮಾಡಿದ 2000 ಜನರಿಗೆ ಉಚಿತ ಪಡಿತರ: ಮೈಸೂರಲ್ಲಿ ವಿನೂತನ ಮತದಾನ ಜಾಗೃತಿ

Lok Sabha Elections: ಮೊದಲು ಮತದಾನ ಮಾಡಿದ 2000 ಜನರಿಗೆ ಉಚಿತ ಪಡಿತರ: ಮೈಸೂರಲ್ಲಿ ವಿನೂತನ ಮತದಾನ ಜಾಗೃತಿ

ರಾಮ್​, ಮೈಸೂರು
| Edited By: |

Updated on: Apr 25, 2024 | 1:53 PM

Share

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನ ಆರಂಭಕ್ಕೆ ದಿನಗಣನೆ ಶುರುವಾಗಿದೆ. ನಾಳೆ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿರುವ ಮತದಾನ ಸಂಜೆ 6 ಗಂಟೆಯವರೆಗೂ ಮತ ಚಲಾಯಿಸಲು ಅವಕಾಶವಿದೆ. ಮೈಸೂರಿನಲ್ಲಿ ಮತದಾನ ಜಾಗೃತಿಗಾಗಿ ಚಿಕ್ಕ ಗಡಿಯಾರ ವೃತ್ತದ ಬಳಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮೊದಲು ಮತದಾನ ಮಾಡಿದ 2000 ಜನರಿಗೆ ವಾಸವಿ ಸೇವಾ ಟ್ರಸ್ಟ್​​​​ನಿಂದ ಉಚಿತ ಪಡಿತರ ವಿತರಣೆ ಮಾಡಲಿದ್ದಾರೆ.

ಮೈಸೂರು, ಏಪ್ರಿಲ್ 25: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ (Lok Sabha elections) ನಾಳೆ ಅಂದರೆ ಏಪ್ರಿಲ್ 26ರಂದು ನಡೆಯಲಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಮೈಸೂರಿನಲ್ಲಿ ಮತದಾನ ಜಾಗೃತಿಗಾಗಿ ಚಿಕ್ಕ ಗಡಿಯಾರ ವೃತ್ತದ ಬಳಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮೊದಲು ಮತದಾನ ಮಾಡಿದ 2000 ಜನರಿಗೆ ವಾಸವಿ ಸೇವಾ ಟ್ರಸ್ಟ್​​​​ನಿಂದ ಉಚಿತ ಪಡಿತರ ವಿತರಣೆ ಮಾಡಲಿದ್ದಾರೆ. ತಲಾ 1 ಕೆಜಿ ಗೋಧಿ ಹಿಟ್ಟು ವಿತರಣೆ ಮಾಡಲಿದ್ದು, ಆ ಮೂಲಕ ಹೆಚ್ಚು ಹೆಚ್ಚು ಜನ ಮತದಾನ ಮಾಡಲು ಪ್ರೋತ್ಸಾಹ ನೀಡಿದ್ದಾರೆ. ನಾಳೆ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿರುವ ಮತದಾನ ಸಂಜೆ 6 ಗಂಟೆಯವರೆಗೂ ಮತ ಚಲಾಯಿಸಲು ಅವಕಾಶವಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 20,92,222, ಈ ಪೈಕಿ ಪುರುಷರು 10,26,324, ಮಹಿಳೆಯರು 10,65,714, ಇತರರು 184, ಒಟ್ಟು 2202, ಈ ಪೈಕಿ 435 ಕ್ರಿಟಿಕಲ್ ಮತಗಟ್ಟೆಗಳು ಸ್ಥಾಪನೆ ಮಾಡಲಾಗಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
Ram
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More