AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್

ಡಿಕಾಕ್ ಸಿಡಿಲಬ್ಬರ… ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್

ಝಾಹಿರ್ ಯೂಸುಫ್
|

Updated on: Dec 30, 2025 | 1:18 PM

Share

Sunrisers Eastern Cape vs Pretoria Capitals: ಈ ಭರ್ಜರಿ ಗೆಲುವಿನೊಂದಿಗೆ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡವು ಬೋನಸ್ ಪಾಯಿಂಟ್ ಪಡೆದುಕೊಂಡಿದೆ. ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ 1.25 ಕ್ಕಿಂತ ಹೆಚ್ಚಿನ ರನ್ ರೇಟ್ ವ್ಯತ್ಯಾಸದಲ್ಲಿ ಗೆಲ್ಲುವ ತಂಡಕ್ಕೆ ಹೆಚ್ಚುವರಿ ಒಂದು ಅಂಕಗಳನ್ನು ನೀಡಲಾಗುತ್ತದೆ. ಅದರಂತೆ ಪ್ರಿಟೋರಿಯ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡವು ಒಟ್ಟು 5 ಅಂಕಗಳನ್ನು ಪಡೆದುಕೊಂಡಿದೆ.

ಸೌತ್ ಆಫ್ರಿಕಾ ಟಿ20 ಲೀಗ್​ನ 5ನೇ ಪಂದ್ಯದಲ್ಲಿ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡವು ಭರ್ಜರಿ ಜಯ ಸಾಧಿಸಿದೆ. ಗೆಬೆಹಾದಲ್ಲಿ ಸೇಂಟ್ ಜಾರ್ಜ್​ ಪಾರ್ಕ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಪ್ರಿಟೋರಿಯ ಕ್ಯಾಪಿಟಲ್ಸ್ ಹಾಗೂ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಕ್ವಿಂಟನ್ ಡಿಕಾಕ್ 47 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 77 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡವು 20 ಓವರ್​ಗಳಲ್ಲಿ 188 ರನ್ ಕಲೆಹಾಕಿತು.

189 ರನ್​ಗಳ ಗುರಿ ಬೆನ್ನತ್ತಿದ ಪ್ರಿಟೋರಿಯ ಕ್ಯಾಪಿಟಲ್ಸ್ ತಂಡವು 18 ಓವರ್​ಗಳಲ್ಲಿ 140 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡವು 48 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಭರ್ಜರಿ ಗೆಲುವಿನೊಂದಿಗೆ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡವು ಬೋನಸ್ ಪಾಯಿಂಟ್ ಪಡೆದುಕೊಂಡಿದೆ. ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ 1.25 ಕ್ಕಿಂತ ಹೆಚ್ಚಿನ ರನ್ ರೇಟ್ ವ್ಯತ್ಯಾಸದಲ್ಲಿ ಗೆಲ್ಲುವ ತಂಡಕ್ಕೆ ಹೆಚ್ಚುವರಿ ಒಂದು ಅಂಕಗಳನ್ನು ನೀಡಲಾಗುತ್ತದೆ. ಅದರಂತೆ ಪ್ರಿಟೋರಿಯ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡವು ಒಟ್ಟು 5 ಅಂಕಗಳನ್ನು ಪಡೆದುಕೊಂಡಿದೆ.