ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದೊಳಗೆ ಹೋಗಲು ಬಿಡದ ಪೊಲೀಸ್ ಅಧಿಕಾರಿಗೆ ಅರ್ ಅಶೋಕ ಮನಬಂದಂತೆ ತರಾಟೆ!

|

Updated on: Jan 03, 2025 | 1:54 PM

ಪೊಲೀಸರ ಸಂದಿಗ್ಧತೆಯನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆ ಎಲ್ಲರಿಗೂ ಇದೆ. ಇದನ್ನು ಥ್ಯಾಂಕ್​ಲೆಸ್​ ಜಾಬ್ ಅಂತ ಹೇಳೋದು ಇದೇ ಕಾರಣಕ್ಕೆ. ಅಶೋಕ ಅವರನ್ನು ಒಳಗೆ ಬಿಟ್ಟರೆ ಮಂತ್ರಿಗಳಿಂದ ಬೈಗುಳ ಬಿಡದಿದ್ದರೆ ವಿರೋಧ ಪಕ್ಷದ ನಾಯಕನಿಂದ ತರಾಟೆ. ಹಿಂದೆ ವಿರೋಧ ಪಕ್ಷದ ನಾಯಕನಾಗಿದ್ದ ಸಿದ್ದರಾಮಯ್ಯ ಆಗಿನ ಪೊಲೀಸ್ ಕಮೀಶನರ್ ಶಂಕರ್ ಬಿದರಿ ವಿರುದ್ಧ ತೊಡೆ ತಟ್ಟಿದ್ದರು, ಈಗ ವಿರೋಧ ಪಕ್ಷದ ನಾಯಕನಾಗಿರುವ ಅಶೋಕ ಅದನ್ನೇ ಮಾಡುತ್ತಿದ್ದಾರೆ. ಪಾಪ ಪೊಲೀಸ್ ಮಾತ್ರ ಸೂತ್ರದ ಗೊಂಬೆ!

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ಬಸ್ ಟಿಕೆಟ್​ಗಳ ದರವನ್ನು ಶೇಕಡಾ 15ರಷ್ಟು ಹೆಚ್ಚು ಮಾಡಿರುವುದನ್ನು ವಿರೋಧಿಸಿ ವಿಪಕ್ಷ ನಾಯಕ ಆರ್ ಅಶೋಕ ಅವರ ನೇತೃತ್ವದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆಯ ಅಂಗವಾಗಿ ಮೆಜೆಸ್ಟಿಕ್ ನಲ್ಲಿರುವ ಕೆಂಪೇಗೌಡ ಬಸ್ ಟರ್ಮಿನಸ್ ಒಳಗೆ ನುಗ್ಗಲು ಪ್ರಯತ್ನಿಸಿದಾಗ ಪೊಲೀಸರೊಂದಿಗೆ ಮಾತಿನ ಚಕಮಕಿ ಮತ್ತು ತಳ್ಳಾಟ ನೂಕಾಟಗಳು ನಡೆದವು. ನಾವು ಪ್ರತಿಭಟನೆ ಮಾಡಲು ಬಂದಿಲ್ಲ ಪ್ರಯಾಣಿಕರಿಗೆ ಹೂ ಕೊಡಲು ಬಂದಿದ್ದೇವೆ ಎನ್ನುತ್ತಾ ಅಶೋಕ ಪಕ್ಷದ ಮುಖಂಡರೊಂದಿಗೆ ನಿಲ್ಲಾಣದೊಳಗೆ ಹೋಗುವಾಗ ಪೊಲೀಸರು ಅಡ್ಡಗಟ್ಟಿದರು. ತಮ್ಮನ್ನು ಅಡ್ಡಗಟ್ಟಿದ ಪೊಲೀಸ್ ಅಧಿಕಾರಿಯ ಮೇಲೆ ಅಶೋಕ ಮನಬಂದಂತೆ ರೇಗಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  2000 ರೂ. ಬದಲು ಬಾಣಂತಿಯರ ಸಾವು ನಿಲ್ಲಿಸಿ, ಅವರಿಗೆ ಬದುಕುವ ಗ್ಯಾರಂಟಿ ಕೊಡಿ: ಆರ್ ಅಶೋಕ್ ವಾಗ್ದಾಳಿ

Published on: Jan 03, 2025 01:54 PM