Karnataka Assembly Polls: ಕನಕಪುರದಿಂದ ಸ್ಪರ್ಧೆ ಆರ್ ಅಶೋಕಗೆ ಬೇಕಿರಲಿಲ್ಲ, ಮಾತಿನಲ್ಲಿ ಬೇಸರ, ಅಸಮಾಧಾನ ಮತ್ತು ಸೋಲಿನ ಛಾಯೆ!

Karnataka Assembly Polls: ಕನಕಪುರದಿಂದ ಸ್ಪರ್ಧೆ ಆರ್ ಅಶೋಕಗೆ ಬೇಕಿರಲಿಲ್ಲ, ಮಾತಿನಲ್ಲಿ ಬೇಸರ, ಅಸಮಾಧಾನ ಮತ್ತು ಸೋಲಿನ ಛಾಯೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 12, 2023 | 11:03 AM

ಪ್ರಶ್ನೆ ಕೇಳುತ್ತಿರುವಾಗಲೇ ಅಶೋಕ ಅಲ್ಲಿಂದ ನಡೆದುಹೋಗುವುದು ಪಕ್ಷದ ತೀರ್ಮಾನ ಅವರನ್ನು ಎಷ್ಟು ಬೇಸರಗೊಳಿಸಿದೆ ಅನ್ನೋದನ್ನು ಸೂಚಿಸುತ್ತದೆ.

ಬೆಂಗಳೂರು: ವಿ ಸೋಮಣ್ಣ ಅವರಂತೆ ಇನ್ನೊಬ್ಬ ಸಚಿವ ಆರ್ ಅಶೋಕ (R Ashoka) ಸಹ ಪಕ್ಷದ ವರಿಷ್ಠರ ತೀರ್ಮಾನದಿಂದ ಅಸಮಾಧಾನಗೊಂಡಿರುವರಾದರೂ ಅದನ್ನು ಹೊರಗೆ ಹಾಕುತ್ತಿಲ್ಲ. ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಗೆಲ್ಲ್ಲುವುದು ಕಷ್ಟ ಅಂತ ಗೊತ್ತಿರುವ ಅವರು ವಿಕ್ಟಿಮ್ ಕಾರ್ಡ್ (victim card) ಪ್ರದರ್ಶಿಸುತ್ತಿದ್ದಾರೆ. ಶಿವಕುಮಾರ್ ಅವರನ್ನು ಸೋಲಿಸುತ್ತೀರಾ ಅಂತ ಕೇಳಿದ ಪ್ರಶ್ನೆಗೆ ಅವರು, ಚುನಾವಣೆಗಳಲ್ಲಿ ಇಂದಿರಾಗಾಂಧಿ, ಹೆಚ್ ಡಿ ದೇವೇಗೌಡ, ಬಿಎಸ್ ಯಡಿಯೂರಪ್ಪ, ಸಿದ್ದರಾಮಯ್ಯ ಮೊದಲಾದವರೆಲ್ಲ ಸೋತಿದ್ದಾರೆ ಅಂತ ಹೇಳುತ್ತಾರೆ. ಅವರ ಮಾತಿನಲ್ಲಿ ಸೋಲಿನ ಛಾಯೆ ಸ್ಪಷ್ಟವಾಗಿ ಗೋಚರಿಸುತ್ತದೆ. ಅದರೆ ಹೈಕಮಾಂಡ್ ತೀರ್ಮಾನವನ್ನು ಕಾಯಾ ವಾಚಾ ಮನಸಾ ಪಾಲಿಸುವುದಾಗಿ ಹೇಳುತ್ತಾರೆ. ಮಾಧ್ಯಮದವರು ಪ್ರಶ್ನೆ ಕೇಳುತ್ತಿರುವಾಗಲೇ ಅಶೋಕ ಅಲ್ಲಿಂದ ನಡೆದುಹೋಗುವುದು ಪಕ್ಷದ ತೀರ್ಮಾನ ಅವರನ್ನು ಎಷ್ಟು ಬೇಸರಗೊಳಿಸಿದೆ ಅನ್ನೋದನ್ನು ಸೂಚಿಸುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ