Karnataka Assembly Polls: ಟಿಕೆಟ್ ಸಿಗದ ಅಸಮಾಧಾನ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದ ಲಕ್ಷ್ನಣ ಸವದಿ
ಅಧಿಕಾರದ ಲಾಲಸೆ ತನಗಿಲ್ಲ ಮತ್ತು ಸ್ವಾಭಿಮಾನವನ್ನು ಅಡವಿಟ್ಟು ಪಕ್ಷದಲ್ಲಿ ಮುಂದುವರಿಯುವುದು ತನ್ನಿಂದಾಗದ ಕೆಲಸ ಎಂದು ಸವದಿ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.
ಬೆಳಗಾವಿ: ಬಿಜೆಪಿಯ ಮತ್ತೊಂದು ವಿಕೆಟ್ ಉರುಳಿದೆ. ವಿಧಾನ ಪರಿಷತ್ ಸದಸ್ಯ ಮತ್ತು ಪಕ್ಷದ ರಾಜ್ಯ ಘಟಕ ಉಪಾಧ್ಯಕ್ಷ ಲಕ್ಷ್ಮಣ ಸವದಿ (Laxman Savadi) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ (prunary membership) ರಾಜೀನಾಮೆ ಸಲ್ಲಿಸುವ ತೀರ್ಮಾನ ಪ್ರಕಟಿಸಿದ್ದಾರೆ. ಅಥಣಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ಸವದಿಗೆ ಅದನ್ನು ಮಹೇಶ್ ಕುಮಟಳ್ಳಿಗೆ (Mahesh Kumatalli) ನೀಡಿದ್ದು ಬಹಳ ಬೇಸರ ಮೂಡಿಸಿ ಪಕ್ಷದಿಂದ ಹೊರಬೀಳುವ ನಿರ್ಧಾರ ತೆಗೆದುಕೊಳ್ಳುವಂತೆ ಪ್ರೇರೇಪಿಸಿದೆ. ಅಧಿಕಾರದ ಲಾಲಸೆ ತನಗಿಲ್ಲ ಮತ್ತು ಸ್ವಾಭಿಮಾನವನ್ನು ಅಡವಿಟ್ಟು ಪಕ್ಷದಲ್ಲಿ ಮುಂದುವರಿಯುವುದು ತನ್ನಿಂದಾಗದ ಕೆಲಸ ಎಂದು ಸವದಿ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos