R Chandru: ಕಬ್ಜ 2 ಸಿನಿಮಾಕ್ಕೆ ಹೊರ ರಾಜ್ಯಗಳಿಂದ ಬರ್ತಾರೆ ಸ್ಟಾರ್ ನಟರು
R Chandru: ಕಬ್ಜ ಸಿನಿಮಾ ಹಿಟ್ ಆದ ಬೆನ್ನಲ್ಲೆ ನಿರ್ದೇಶಕ ಆರ್ ಚಂದ್ರು ಕಬ್ಜ 2 ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪರಭಾಷೆಯ ಸ್ಟಾರ್ ನಟರು ನಟಿಸಲಿದ್ದಾರೆ ಎಂದಿದ್ದಾರೆ ಚಂದ್ರು.
ಆರ್ ಚಂದ್ರು (R Chandru) ನಿರ್ದೇಶನ ಮಾಡಿ, ಉಪೇಂದ್ರ (Upendra) ನಟಿಸಿದ್ದ ಪ್ಯಾನ್ ಇಂಡಿಯಾ (Pan India) ಸಿನಿಮಾ ಕಬ್ಜ ಸೂಪರ್ ಹಿಟ್ ಆಗಿದೆ. ಈಗಾಗಲೇ ಕಬ್ಜ 2 ಸಿನಿಮಾದ ಪೋಸ್ಟರ್ ಅನ್ನು ಆರ್ ಚಂದ್ರು ಬಿಡುಗಡೆ ಮಾಡಿದ್ದಾರೆ. ಕಬ್ಜ ಸಿನಿಮಾದಲ್ಲಿ ಉಪೇಂದ್ರ ಜೊತೆಗೆ ಕನ್ನಡದ ಸ್ಟಾರ್ ನಟರಾದ ಸುದೀಪ್, ಶಿವರಾಜ್ ಕುಮಾರ್ ನಟಿಸಿದ್ದರು. ಆದರೆ ಕಬ್ಜ 2 ಸಿನಿಮಾಕ್ಕೆ ಹೊರ ರಾಜ್ಯಗಳ ಸ್ಟಾರ್ ನಟರು ಇರಲಿದ್ದಾರಂತೆ. ಈ ಬಗ್ಗೆ ಸ್ವತಃ ಆರ್.ಚಂದ್ರು ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ