AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಣ್ಣ-ಉಪೇಂದ್ರ ಮತ್ತು ಲೂಸ್ ಮಾದ ಯೋಗಿ: ಯಾರ ಪಾಲಾಗುವಳು ‘ರೋಸಿ’?

Title Controversy: ಲೂಸ್ ಮಾದ ಯೋಗಿ ನಟಿಸುತ್ತಿರುವ ರೋಸಿ ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೆ ನಡೆದಿತ್ತು. ಇದೀಗ ಸಿನಿಮಾದ ಟೈಟಲ್ ವಿವಾದಕ್ಕೆ ಈಡಾಗಿದೆ. ಟೈಟಲ್ ವಿರುದ್ಧ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

ಶಿವಣ್ಣ-ಉಪೇಂದ್ರ ಮತ್ತು ಲೂಸ್ ಮಾದ ಯೋಗಿ: ಯಾರ ಪಾಲಾಗುವಳು 'ರೋಸಿ'?
ರೋಸಿ ಸಿನಿಮಾ ಟೈಟಲ್ ವಿವಾದ
ಮಂಜುನಾಥ ಸಿ.
|

Updated on:Apr 16, 2023 | 8:49 PM

Share

ಇತ್ತೀಚೆಗಷ್ಟೆ ನಟ ಲೂಸ್ ಮಾದ ಯೋಗಿ (Loose Mada Yogi) ನಟನೆಯ ಹೊಸ ಸಿನಿಮಾ ಒಂದು ಸೆಟ್ಟೇರಿತ್ತು, ಸಿನಿಮಾದ ಹೆಸರು ರೋಸಿ. ಯೋಗಿಯ ಸ್ನೇಹಿತ ಡಾಲಿ ಧನಂಜಯ್ (Daali Dhananjay) ಬಂದು ಕ್ಲಾಪ್ ಮಾಡಿ ಸಿನಿಮಾಕ್ಕೆ ಶುಭ ಹಾರೈಸಿದ್ದರು. ಆದರೆ ಸಿನಿಮಾ ಶುರುವಾದ ಕೂಡಲೇ ವಿವಾದಕ್ಕೆ ಕಾರಣವಾಗಿದೆ. ಜನಪ್ರಿಯ ನಿರ್ಮಾಪಕ ರಮೇಶ್ ರೆಡ್ಡಿಯವರು ಲೂಸ್ ಮಾದ ಅವರ ಹೊಸ ಸಿನಿಮಾದ ಹೆಸರಿನ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು ನೀಡಿ, ರೋಸಿ (Rosy) ಸಿನಿಮಾ ಟೈಟಲ್ (Movie Title) ತಮ್ಮ ಬಳಿ ಇದೆ ಎಂದಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ನಾತಿಚರಾಮಿ, ಇತ್ತೀಚೆಗಿನ ಗಾಳಿಪಟ 2, ಪಡ್ಡೆಹುಲಿ ಇನ್ನೂ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ರಮೇಶ್ ರೆಡ್ಡಿ (Ramesh Reddy), ಅರ್ಜುನ್ ಜನ್ಯ (Arjun Janya) ನಿರ್ದೇಶಿಸುತ್ತಿರುವ ಚೊಚ್ಚಿಲ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಆ ಸಿನಿಮಾಕ್ಕೆ ರೋಸಿ 45 ಎಂಬ ಹೆಸರನ್ನು ನೊಂದಣಿ ಮಾಡಿಸಿದ್ದಾರೆ. ಆದರೆ ಯೋಗಿಯ ಸಿನಿಮಾಕ್ಕೂ ರೋಸಿ ಎಂದೇ ಹೆಸರಿಟ್ಟಿರುವ ಕಾರಣ ಸೂರಜ್ ಪ್ರೊಕ್ಷನ್​ನ ರಮೇಶ್ ರೆಡ್ಡಿ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆಯನ್ನೂ ಹೊರಡಿಸಿರುವ ರಮೇಶ್ ರೆಡ್ಡಿ, ಸೂರಜ್ ಪ್ರೊಡಕ್ಷನ್ಸ್ ಲಾಂಛನದ ಮೂಲಕ ‘ರೋಸಿ 45’ ಶೀರ್ಷಿಕೆಯನ್ನು ನೊಂದಾಯಿಸಲಾಗಿತ್ತು. ಈಗ ಡಿ ವೈ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಸಿನಿಮಾಕ್ಕೂ ‘ರೋಸಿ’ ಎಂದು ಹೆಸರು ಇಡಲಾಗಿದೆ. ಈ ವಿಷಯವನ್ನು ಕರ್ನಾಟಕ ವಾಣಿಜ್ಯ ಮಂಡಳಿ ಗಮನಕ್ಕೆ ತರಲಾಗಿದೆ.‌ ಕರ್ನಾಟಕ ಚಲನಚಿತ್ರ ವಾಣಿಜ್ಯ ‌ಮಂಡಳಿ ಮೊದಲು ಶೀರ್ಷಿಕೆ ನೊಂದಾಯಿಸಿದವರು ಮಾತ್ರ ಶೀರ್ಷಿಕೆ ಬಳಸಿಕೊಳ್ಳಬಹುದು ಎಂದು ಹೇಳಿದೆ. ಹಾಗಾಗಿ, ಸೂರಜ್ ಪ್ರೊಡಕ್ಷನ್ಸ್‌ಗೆ ‘ರೋಸಿ 45’ ಶೀರ್ಷಿಕೆ ಸೇರಿದೆ. ಇನ್ನು‌ ಮುಂದೆ ಯಾರು ಕೂಡ ‘ರೋಸಿ’ ಶೀರ್ಷಿಕೆ ಬಳಸುವ ಹಾಗಿಲ್ಲ ಹಾಗೂ ಶೀರ್ಷಿಕೆ ಪಕ್ಕದಲ್ಲಿ ಬೇರೆ ಪದ ಹಾಗೂ ನಂಬರ್‌ಗಳನ್ನಾಗಲಿ ಸೇರಿಸಿಕೊಂಡು ಸಹ ಬಳಸುವ ಹಾಗಿಲ್ಲ’ ಎಂದು ‘ರೋಸಿ 45’ ಸಿನಿಮಾದ ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ನಿರ್ದೇಶಕ ಅರ್ಜುನ್ ಜನ್ಯ ತಿಳಿಸಿದ್ದಾರೆ.

ಇದೀಗ ಬಂದಿರುವ ಸುದ್ದಿಯಂತೆ ಯೋಗಿ ಹಾಗೂ ತಂಡವು ತಾವು ಇಟ್ಟಿದ್ದ ರೋಸಿ ಹೆಸರನ್ನು ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದ್ದು ಅರ್ಜುನ್ ಜನ್ಯ ಅವರು ತಮ್ಮ ಸಿನಿಮಾಕ್ಕೆ ನಿರಾತಂಕವಾಗಿ ರೋಸಿ ಹೆಸರನ್ನು ಬಳಸಬಹುದಾಗಿದೆ. ಅಂದಹಾಗೆ ಅರ್ಜುನ್ ಜನ್ಯ ಮೊದಲ ಸಿನಿಮಾಕ್ಕೆ ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ನಾಯಕರಾಗಿದ್ದಾರೆ. ಈ ಸಿನಿಮಾಕ್ಕೆ ರೋಸಿ 45 ಎಂದು ಹೆಸರಿಡಲಾಗಿದೆ. ಸಿನಿಮಾದ ಚಿತ್ರೀಕರಣ ಇನ್ನೇನು ಶುರುವಾಗಬೇಕಿದೆ. ಇದು ಅರ್ಜುನ್ ಜನ್ಯರ ಮೊಟ್ಟ ಮೊದಲ ನಿರ್ದೇಶನದ ಸಿನಿಮಾ ಆಗಲಿದೆ.

ಇದನ್ನೂ ಓದಿ:Loose Mada Yogi: ‘ಹೆಂಡತಿ ಬಿಟ್ಟು ಹೋಗಿದ್ದಾಳೆ ಅಂತ ಸುದ್ದಿ ಮಾಡಿದ್ರು’; ಲೂಸ್ ಮಾದ

ಇನ್ನು ಲೂಸ್ ಮಾದ ಯೋಗಿಯ 50ನೇ ಸಿನಿಮಾಕ್ಕೆ ರೋಸಿ ಎಂದು ಹೆಸರಿಡಲಾಗಿತ್ತು. ಡಾಲಿ ಧನಂಜಯ್ ನಟಿಸಿದ್ದ ಹೆಡ್-ಬುಷ್ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಶೂನ್ಯ, ಲೂಸ್ ಮಾದರ 50ನೇ ಸಿನಿಮಾ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಗ್ಯಾಂಗ್​ಸ್ಟರ್ ಕತೆಯನ್ನು ಈ ಸಿನಿಮಾ ಹೊಂದಿದೆ. ಸಿನಿಮಾದ ಪೋಸ್ಟರ್ ಸಹ ಈಗಾಗಲೇ ಬಿಡುಗಡೆ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:47 pm, Sun, 16 April 23