ದುಡಿಸಿಕೊಂಡು ಮೋಸ ಮಾಡಿದ್ರು, ಕನ್ನಡ ಪ್ಯಾನ್ ಇಂಡಿಯಾ ನಿರ್ದೇಶಕನ ಮೇಲೆ ನಟ ಗರಂ

Raghuram: ನಟ, ನಿರ್ದೇಶಕ ರಘುರಾಮ್, ಇತ್ತೀಚೆಗೆ ಬಿಡುಗಡೆ ಆದ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ತಮ್ಮನ್ನು 45 ದಿನಗಳ ಕಾಲ ದುಡಿಸಿಕೊಂಡು ಹೊರಗೆ ಹಾಕಿ ಅವಮಾನ ಮಾಡಿರುವ ಬಗ್ಗೆ ಮಾತನಾಡಿದ್ದಾರೆ.

ದುಡಿಸಿಕೊಂಡು ಮೋಸ ಮಾಡಿದ್ರು, ಕನ್ನಡ ಪ್ಯಾನ್ ಇಂಡಿಯಾ ನಿರ್ದೇಶಕನ ಮೇಲೆ ನಟ ಗರಂ
ರಘುರಾಮ್
Follow us
ಮಂಜುನಾಥ ಸಿ.
|

Updated on:Apr 18, 2023 | 8:36 PM

ಜೋಗಿ (Jogi) ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ಸಹ ನಟನಾಗಿ, ಹಾಸ್ಯ ಪಾತ್ರಗಳಲ್ಲಿ ನಟಿಸಿರುವ ಹಾಗೂ ಸಿನಿಮಾ ನಿರ್ದೇಶನ ಸಹ ಮಾಡಿರುವ ರಘುರಾಮ್ (Raghu Ram), ಇದೀಗ ಫುಲ್​ಟೈಮ್ ನಟನೆ ಜೊತೆಗೆ ಯೂಟ್ಯೂಬ್ ಚಾನೆಲ್ (YouTube Chanel)​ ಒಂದರ ಮೂಲಕ ಸಿನಿಮಾ ರಂಗದ ಹಿರಿಯರ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಅವರ ಯೂಟ್ಯೂಬ್ ಚಾನೆಲ್​ನಲ್ಲಿ ತಮ್ಮದೇ ಸಂದರ್ಶನ ಪ್ರಕಟಿಸಿರುವ ರಘುರಾಮ್, ಇತ್ತೀಚೆಗೆ ಬಿಡುಗಡೆ ಆದ ಪ್ಯಾನ್ ಇಂಡಿಯಾ (Pan India) ಸಿನಿಮಾ ಒಂದು ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿತು ಎಂದು ಆರೋಪ ಮಾಡಿದ್ದಾರೆ.

”ಇತ್ತೀಚೆಗೆ ಬಿಡುಗಡೆ ಆದ ಸೋ ಕಾಲ್ಡ್ ಪ್ಯಾನ್ ಇಂಡಿಯಾ ಸಿನಿಮಾದಿಂದ ಆದ ಕೆಟ್ಟ ಅನುಭವದ ಬಗ್ಗೆ ಹೇಳಲೇ ಬೇಕು, ಆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನನ್ನನ್ನು 45 ದಿನಗಳ ಕಾಲ ದುಡಿಸಿಕೊಂಡಿದ್ದಾರೆ. ಒಂದಿಷ್ಟು ಸಂಭಾವನೆಯನ್ನೂ ನನಗೆ ಕೊಟ್ಟರು, ಆದರೆ ನನ್ನನ್ನು ಕೇಳದೆ, ನನಗೆ ಹೇಳದೆ ಆ ಸಿನಿಮಾದಿಂದ ನನ್ನನ್ನು ಕಿತ್ತೊಗೆದರು. ಆ ಸಿನಿಮಾದಲ್ಲಿ ಎಲ್ಲೊ ಒಂದು ದೃಶ್ಯದಲ್ಲಿ ಹೀಗೆ ಬಂದು ಹಾಗೆ ಹೋಗ್ತೀನಂತೆ, ನಾನಿನ್ನೂ ಆ ಸಿನಿಮಾ ನೋಡಿಲ್ಲ. ನೋಡುವ ಇಷ್ಟವೂ ಇಲ್ಲ” ಎಂದಿದ್ದಾರೆ ರಘುರಾಮ್.

”ಅವರೆಲ್ಲ ದೊಡ್ಡ ನಿರ್ದೇಶಕರು, ಪ್ಯಾನ್ ಇಂಡಿಯಾ ಡೈರೆಕ್ಟರ್​ಗಳು, ಅವರು ನನಗೆ ಕಳಿಸಿರುವ ವಾಟ್ಸ್​ಆಪ್​ ಮೆಸೇಜ್​ಗಳು ನನ್ನ ಬಳಿ ಇವೆ. ಇದು ಏಕೆ ಹೇಳಬೇಕಾಯಿತು ಎಂದರೆ, ಅವರು ನನಗೆ ಮಾಡಿರುವುದು ಅವಮಾನ, ನಾನೇನು ದೊಡ್ಡ ನಟನಲ್ಲ, ದೊಡ್ಡ ನಿರ್ದೇಶಕ ಅಲ್ಲ, ನನ್ನನ್ನು ಕರೆದು ಪಾತ್ರ ಕೊಟ್ರಿ, ಪಾತ್ರ ಮಾಡಿದೆ. ರಾತ್ರಿ-ಹಗಲು ಎನ್ನದೆ ಆ ಸಿನಿಮಾಕ್ಕಾಗಿ ಕೆಲಸ ಮಾಡಿದ್ದೇನೆ. ಗೆಟಪ್​ಗಳನ್ನು ಹಾಕಿದಿರಿ, ವಿಗ್ ಹಾಕಿದಿರಿ ಹಾಕಿಸಿಕೊಂಡೆ, ಮುಖಕ್ಕೆ ಕಪ್ಪು ಬಳಿದುಕೊಂಡು ನಟಿಸಿದೆ. ಕೆಸರಲ್ಲಿ ಇಳಿಸಿದರು, ಇಳಿದೆ, ಟೈರ್ ಸುಟ್ಟೆ ಯಾವುದೇ ಚಕಾರ ಎತ್ತದೆ ನಟಿಸಿದೆ. ಬೆಳಿಗ್ಗೆ 9ಕ್ಕೆ ಹೋಗಿ ರಾತ್ರಿ 2 ಕ್ಕೆ ಬರುತ್ತಿದ್ದೆ. ಇಷ್ಟೆಲ್ಲ ಆದರೂ ನನ್ನ ಪಾತ್ರವನ್ನು ತೆಗೆಯುವ ಮುಂಚೆ ನನಗೆ ಒಂದು ಮಾತು ಹೇಳಬೇಕು ಎನಿಸಲಿಲ್ಲವಾ” ಎಂದು ರಘುರಾಮ್ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:25 ದಿನ ಪೂರೈಸಿದ ಕಬ್ಜ, ಸಿನಿಮಾದ ಯಶ್ಸನ್ನು ಆರ್.ಚಂದ್ರು ಅರ್ಪಿಸಿದ್ದು ಯಾರಿಗೆ?

”ನೀವು ಬಹಳ ದೊಡ್ಡ ತಪ್ಪು ಮಾಡಿದ್ದೀರಿ. ನನಗೆ ಮಾತ್ರ ಅಲ್ಲ, ಯಾರಿಗೆ ಆದರೂ ಕರೆದು ಪಾತ್ರ ಮಾಡಿಸಿ ಆ ನಂತರ ಹೀಗೆ ಅವಮಾನ ಮಾಡಬೇಡಿ. ನಾನು ನಿಮ್ಮ ಸಿನಿಮಾದಲ್ಲಿ ನಟಿಸುವಾಗ ನನಗೆ ಬಿಗ್​ಬಾಸ್ ಆಫರ್ ಬಂತು. ಒಳ್ಳೆಯ ಸಂಭಾವನೆ ಕೊಡುವುದಾಗಿ ಸಹ ಹೇಳಿದ್ದರು. ಆದರೆ ನಾನು ಮೂರು ತಿಂಗಳು ಅಲ್ಲಿಗೆ ಹೋದರೆ ಸಿನಿಮಾಕ್ಕೆ ಸಮಸ್ಯೆ ಆಗುತ್ತದೆ ಎಂದು ನಾನು ಹೋಗಲಿಲ್ಲ. ಇದು ನಿಮಗೂ ಗೊತ್ತು. ಇಷ್ಟೆಲ್ಲ ನಾನು ಸಿನಿಮಾಕ್ಕೆ ಮಾಡಿರುವಾಗ ನನ್ನನ್ನು ಒಂದು ಮಾತು ಕೇಳದೆ ನನ್ನನ್ನು ಕಡೆಗಣಸಿದ್ದು, ನೀವು ನನಗೆ ಮಾಡಿರುವ ಅವಮಾನ”ಎಂದಿದ್ದಾರೆ ರಘುರಾಮ್.

ಒಬ್ಬ ನಿರ್ದೇಶಕ, ನಿರ್ಮಾಪಕ ಯಾರಿಗೇ ಆದರೂ ಈ ರೀತಿಯ ಕಾರ್ಯ ಶೋಭೆ ತರುವುದಿಲ್ಲ. ನೀವು ನಾಳೆ ಪ್ಯಾನ್ ವರ್ಲ್ಡ್ ಸಿನಿಮಾ ಮಾಡಿದರೂ ಸರಿ ನನಗೆ ಈಗ ಮಾಡಿರುವಂತೆ ಇನ್ಯಾರಿಗೂ ಅವಮಾನ ಮಾಡಬೇಡಿ. ಇದು ಸರಿಯಾದ ಕ್ರಮವಲ್ಲ ಎಂದು ರಘುರಾಮ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:35 pm, Tue, 18 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ