ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್
ನಟಿ ರಚಿತಾ ರಾಮ್ ಅವರು ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಒಂದನ್ನು ಮಾಡಿದ್ದಾರೆ. ಈ ಮನವಿಯಲ್ಲಿ ಅವರು ಒಂದು ವಿಷಯವನ್ನು ಒತ್ತಿ ಹೇಳಿದ್ದಾರೆ. ಅದುವೇ ಕಟೌಟ್. ಹೀರೋಗಳ ರೀತಿ ಹೀರೋಯಿನ್ಗಳಿಗೂ ಕಟೌಟ್ ಬೇಕು ಎಂಬುದು ರಚಿತಾ ರಾಮ್ ಅವರ ಒತ್ತಾಯ. ಆ ಬಗ್ಗೆ ಅವರೇ ಆಡಿದ ಮಾತು ಇಲ್ಲಿದೆ.
ಚಿತ್ರಮಂದಿರಗಳ ಎದುರು ಸಾಮಾನ್ಯವಾಗಿ ದೊಡ್ಡದಾಗಿ ಹೀರೋಗಳ ಕಟೌಟ್ ಹಾಕಲಾಗುತ್ತದೆ. ಹೀರೋಯಿನ್ಗಳ ಕಟೌಟ್ ನಿಲ್ಲಿಸಲಾಗೋದಿಲ್ಲ. ‘ಲ್ಯಾಂಡ್ ಲಾರ್ಡ್’ ಸಿನಿಮಾಗಾಗಿ ರಚಿತಾ ಕಟೌಟ್ ನಿಲ್ಲಿಸಲಾಗಿದೆ. ಹೀರೋಗಳ ಪಕ್ಕದಲ್ಲಿ ಹೀರೋಯಿನ್ಗಳ ಕಟೌಟ್ ನಿಲ್ಲಿಸಬೇಕು ಎಂಬುದು ಅವರ ಕೋರಿಕೆ. ‘ಎಲ್ಲಾ ಹೀರೋಯಿನ್ಗಳು ಕಟೌಟ್ ಬೇಕು. ಅವರ ಕಟೌಟ್ ನಿಲ್ಲಿಸಬೇಕು. ಇದು ಚಿತ್ರತಂಡಕ್ಕೆ ನನ್ನ ಮನವಿ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
