Rachita Ram: ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಬಗ್ಗೆ ರಚಿತಾ ರಾಮ್ ಮಾತು
Sanju Weds Geetha 2: ಸಂಜು ವೆಡ್ಸ್ ಗೀತಾ 2 ಸಿನಿಮಾ ಇಂದು ಅಧಿಕೃತವಾಗಿ ಲಾಂಚ್ ಆಗಿದೆ. ಸಿನಿಮಾದ ನಾಯಕಿ ರಚಿತಾ ರಾಮ್, ಸಿನಿಮಾ ತಂಡದ ಬಗ್ಗೆ ಖುಷಿಯಿಂದ ಮಾತನಾಡಿದ್ದಾರೆ.
‘ಸಂಜು ವೆಡ್ಸ್ ಗೀತಾ 2′ (Sanju Weds Geetha) ಸಿನಿಮಾದ ಲಾಂಚ್ ಇಂದು (ಆಗಸ್ಟ್ 15) ಅಧಿಕೃತವಾಗಿ ನೆರವೇರಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಕ್ಲ್ಯಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಸಿನಿಮಾದ ನಾಯಕಿ ರಚಿತಾ ರಾಮ್ (Rachita Ram) ಸಹ ವೇದಿಕೆ ಮೇಲೆ ಹಾಜರಿದ್ದು, ಸಿನಿಮಾದ ಬಗ್ಗೆ ಸಿನಿಮಾ ತಂಡದ ಬಗ್ಗೆ ಖುಷಿಯಿಂದ ಹೇಳಿಕೊಂಡರು. ಅಲ್ಲಿಯೇ ಇದ್ದ ನಟ ಅರುಣ್ ಸಾಗರ್, ರಚಿತಾರ ಕಾಲೆಳೆದು ನಗಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ