ಹುಟ್ಟುಹಬ್ಬ ಆಚರಣೆಗೆ ಕಾರಣವಾದವರ ಕೊಂಡಾಡಿದ ನಟಿ ರಾಧಿಕಾ ಕುಮಾರಸ್ವಾಮಿ
ರಾಧಿಕಾ ಕುಮಾರಸ್ವಾಮಿ

ಹುಟ್ಟುಹಬ್ಬ ಆಚರಣೆಗೆ ಕಾರಣವಾದವರ ಕೊಂಡಾಡಿದ ನಟಿ ರಾಧಿಕಾ ಕುಮಾರಸ್ವಾಮಿ

|

Updated on: Nov 11, 2023 | 10:14 PM

Radhika Kumaraswamy: ನಟಿ ರಾಧಿಕಾ ಕುಮಾರಸ್ವಾಮಿ ಇಂದು (ನವೆಂಬರ್ 11) ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಕಾರ್ಯಕ್ರಮ ಸಾಧ್ಯವಾಗಿಸಲು ಕಾರಣರಾದವರಿಗೆ ಧನ್ಯವಾದ ಹೇಳಿದರು.

ನಟಿ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಇಂದು (ನವೆಂಬರ್ 11) ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ತಮ್ಮ ಹೊಸ ಸಿನಿಮಾ ‘ಅಜಾಗ್ರತ’ ಪೋಸ್ಟರ್ ಬಿಡುಗಡೆ, ‘ಭೈರಾದೇವಿ’ ಸಿನಿಮಾದ ಟೀಸರ್ ಬಿಡುಗಡೆ ಎಲ್ಲವನ್ನೂ ಒಟ್ಟೊಟ್ಟಿಗೆ ಮಾಡಿದ್ದಾರೆ. ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು, ಹುಟ್ಟುಹಬ್ಬದಂದು ತಮ್ಮ ಸಿನಿಮಾದ ಟೀಸರ್ ಬಿಡುಗಡೆ ಆಗುತ್ತಿರುವುದು ಇದೆಲ್ಲವೂ ಬಹಳ ವಿಶೇಷ ಎಂದ ರಾಧಿಕಾ ಕುಮಾರಸ್ವಾಮಿ, ಇದೆಲ್ಲ ಸಾಧ್ಯವಾಗಲು ಕಾರಣರಾದ ತಮ್ಮ ಸಹೋದರನನ್ನು ಮನಸಾರೆ ಕೊಂಡಾಡಿದರು. ಅವರಿಗೆ ಹಾಗೂ ‘ಅಜಾಗ್ರತ’ ಸಿನಿಮಾದ ನಿರ್ದೇಶಕರಿಗೆ ಧನ್ಯವಾದ ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ