ಅಭಿಮಾನಿಗಳ ಜೊತೆ ಬರ್ತ್​ಡೇ ಆಚರಿಸಿಕೊಳ್ಳಲಿರುವ ರಾಧಿಕಾ ಕುಮಾರಸ್ವಾಮಿ; ಇಲ್ಲಿದೆ ಸ್ಥಳ, ಸಮಯದ ವಿವರ

ಅಭಿಮಾನಿಗಳ ಜೊತೆ ಬರ್ತ್​ಡೇ ಆಚರಿಸಿಕೊಳ್ಳಲಿರುವ ರಾಧಿಕಾ ಕುಮಾರಸ್ವಾಮಿ; ಇಲ್ಲಿದೆ ಸ್ಥಳ, ಸಮಯದ ವಿವರ

ರಾಜೇಶ್ ದುಗ್ಗುಮನೆ
|

Updated on:Nov 09, 2023 | 11:22 AM

ಕಳೆದ ಕೆಲ ವರ್ಷಗಳಿಂದ ಅವರಿಗೆ ಅಭಿಮಾನಿಗಳನ್ನು ಭೇಟಿ ಮಾಡೋಕೆ ಸಾಧ್ಯ ಆಗಿರಲಿಲ್ಲ. ಹೀಗಾಗಿ, ಅವರು ಈ ಬಾರಿ ಜನ್ಮದಿನದಂದು ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ.

ರಾಧಿಕಾ ಕುಮಾರಸ್ವಾಮಿ (Radhika Kumaraswamy) ಅವರು ನವೆಂಬರ್ 11ರಂದು ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅವರಿಗೆ ಅಭಿಮಾನಿಗಳನ್ನು ಭೇಟಿ ಮಾಡೋಕೆ ಸಾಧ್ಯ ಆಗಿರಲಿಲ್ಲ. ಹೀಗಾಗಿ, ಅವರು ಈ ಬಾರಿ ಜನ್ಮದಿನದಂದು ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ‘ಎಲ್ಲರಿಗೂ ನಮಸ್ಕಾರ. ಹಲವು ವರ್ಷಗಳಿಂದ ಅಭಿಮಾನಿಗಳನ್ನು ಭೇಟಿ ಮಾಡೋಕೆ ಆಗಿರಲಿಲ್ಲ. ನವೆಂಬರ್ 11ರಂದು ಶನಿವಾರ ನನ್ನ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ. ಅಂದು ನಿಮಗೆ ಸಿಗುತ್ತೇನೆ’ ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ. ಇದರ ಜೊತೆಗೆ ಅವರು ಭೇಟಿ ಆಗೋ ಅಡ್ರೆಸ್​ ಕೂಡ ನೀಡಿದ್ದಾರೆ. ವಿಳಾಸ ಈ ಕೆಳಗಿನಂತಿದೆ. 10/11 ಎರಡನೇ ಮುಖ್ಯರಸ್ತೆ, ಎರಡನೇ ಕ್ರಾಸ್ ಆರ್​ಎಂವಿ ಎರಡನೇ ಸ್ಟೇಜ್, ಮೂರನೇ ಬ್ಲಾಕ್ ನ್ಯೂ ಬೆಲ್ ರೋಡ್, ಡಾಲರ್ಸ್ ಕಾಲೋನಿ ಬೆಂಗಳೂರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Nov 09, 2023 11:22 AM