ಹೆಣ್ಣಿನ ವೇಷದಲ್ಲಿ ಬಂದ ತುಕಾಲಿ ಸಂತೋಷ್ಗೆ ಸಖತ್ ಡಿಮ್ಯಾಂಡ್
ಬಿಗ್ ಬಾಸ್ನಲ್ಲಿ ಸಂತೋಷ್ ಮಾಡಿದ ಜೋಕ್ಗಳಿಗೆ ಅನೇಕರಿಗೆ ನೋವುಂಟಾಗಿದೆ. ಇದರಿಂದ ಅವರು ಕನ್ಫ್ಯೂಸ್ ಆಗಿದ್ದರು. ಯಾವ ರೀತಿಯಲ್ಲಿ ಜನರ ನಗಿಸಬೇಕು ಎಂಬುದೇ ಅವರಿಗೆ ತಿಳಿಯುತ್ತಿರಲಿಲ್ಲ. ಹೀಗಾಗಿ ಸಂತೋಷ್ ಅವರು ಹೊಸ ಐಡಿಯಾ ಮಾಡಿದ್ದಾರೆ.
ತುಕಾಲಿ ಸಂತೊಷ್ (Tukali Santosh) ಅವರು ಬಿಗ್ ಬಾಸ್ ಮನೆಯಲ್ಲಿ ಹೆಣ್ಣಿನ ಗೆಟಪ್ನಲ್ಲಿ ಬಂದಿದ್ದಾರೆ. ಅವರನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಸೀರೆ ಉಟ್ಟು ತುಕಾಲಿ ಸಂತೋಷ್ ಅವರು ಎಲ್ಲರ ಹಿಂದೆ ಬಿದ್ದಿದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಂಚಿಕೊಳ್ಳಲಾಗಿದೆ. ಅವರು ಎಲ್ಲರನ್ನೂ ನಗಿಸುವ ಪ್ರಯತ್ನ ಮಾಡಿದ್ದಾರೆ. ಬಿಗ್ ಬಾಸ್ನಲ್ಲಿ ಸಂತೋಷ್ ಮಾಡಿದ ಜೋಕ್ಗಳಿಗೆ ಅನೇಕರಿಗೆ ನೋವುಂಟಾಗಿದೆ. ಇದರಿಂದ ಅವರು ಕನ್ಫ್ಯೂಸ್ ಆಗಿದ್ದರು. ಯಾವ ರೀತಿಯಲ್ಲಿ ಜನರ ನಗಿಸಬೇಕು ಎಂಬುದೇ ಅವರಿಗೆ ತಿಳಿಯುತ್ತಿರಲಿಲ್ಲ. ಹೀಗಾಗಿ ಸಂತೋಷ್ ಅವರು ಹೊಸ ಐಡಿಯಾ ಮಾಡಿದ್ದಾರೆ. ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ 24 ಗಂಟೆ ಲೈವ್ ಪ್ರಸಾರ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:27 am, Thu, 9 November 23