‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ

Updated on: Aug 11, 2025 | 10:35 AM

ರಾಘವೇಂದ್ರ ಹೆಗಡೆ ಹಾಗೂ ಧ್ರುವ ಸರ್ಜಾ ಮಧ್ಯೆ ಕಿತ್ತಾಟ ಶುರುವಾಗಿದೆ. ‘ದಿ ಸೋಲ್ಜರ್’ ಸಿನಿಮಾ ಮಾಡುವ ವಿಚಾರದಲ್ಲಿ ಇಬ್ಬರೂ ಒಮ್ಮತದ ನಿರ್ಧಾರಕ್ಕೆ ಬರೋಕೆ ಆಗಿಲ್ಲ. ಹೀಗಿರುವಾಗಲೇ ಧ್ರುವ ಬಗ್ಗೆ ರಾಘವೇಂದ್ರ ಅವರು ಹೊಸ ಆರೋಪವನ್ನು ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

‘ಧ್ರುವ ಸರ್ಜ ಕಡೆಯಿಂದ ವಂಚನೆ ಆಗಿದೆ’ ಎಂದು ರಾಘವೇಂದ್ರ ಹೆಗ್ಡೆ (Raghavendra Hegde) ಆರೋಪ ಮಾಡಿದ್ದರು. ಈ ಆರೋಪದ ಬೆನ್ನಲ್ಲೇ ಧ್ರುವ ಸರ್ಜಾ ಟೀಂ ಇದನ್ನು ಸುಳ್ಳು ಎಂದು ಕರೆದಿತ್ತು. ‘ನಮ್ಮದೇನು ತಪ್ಪಿಲ್ಲ. ರಾಘವೇಂದ್ರ ಕಡೆಯಿಂದಲೇ ವಿಳಂಬ ಆಗುತ್ತಿದೆ. ಅವರು ಕನ್ನಡದಲ್ಲಿ ಸಿನಿಮಾ ಮಾಡಲು ಆಸಕ್ತಿ ತೋರಿಸುತ್ತಿಲ್ಲ’ ಎಂದಿದ್ದರು. ಈ ಬೆನ್ನಲ್ಲೇ ರಾಘವೇಂದ್ರ ಸ್ಪಷ್ಟನೆ ಕೊಟ್ಟಿದ್ದಾರೆ. ‘ಧ್ರುವ ಕಡೆಯಿಂದ ನನಗೆ 8 ವರ್ಷ ವ್ಯರ್ಥವಾಗಿದೆ. ನಾನು ಕನ್ನಡದಲ್ಲೇ ಸಿನಿಮಾ ಮಾಡಲು ಆಸಕ್ತಿ ತೋರಿಸಿದ್ದೆ. ಅವರೇ ಪ್ಯಾನ್ ಇಂಡಿಯಾ ಮಾಡೋಣ ಎಂದು ಒತ್ತಾಯಿಸಿದ್ದು’ ಎಂದು ಅವರು ಪ್ರತ್ಯಾರೋಪ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.