‘ಅಮ್ಮ ಇಲ್ಲದಿದ್ದರೆ ಎಷ್ಟು ಕಷ್ಟ ಅಂತ ನಮಗೆ ಗೊತ್ತು’: ರವಿಚಂದ್ರನ್ ತಾಯಿಯ ಅಂತಿಮ ದರ್ಶನ ಪಡೆದ ರಾಘಣ್ಣ
‘ನಮಗೆ ಈ ಕುಟುಂಬ ತುಂಬ ಪರಿಚಯ. ರವಿಚಂದ್ರನ್ ಅವರ ತಾಯಿ ನಮ್ಮನ್ನು ಆಟ ಆಡಿಸಿದ್ದರು’ ಎಂದು ಪಟ್ಟಮ್ಮಾಳ್ ವೀರಾಸ್ವಾಮಿ ಬಗ್ಗೆ ರಾಘವೇಂದ್ರ ರಾಜ್ಕುಮಾರ್ ಮಾತನಾಡಿದ್ದಾರೆ.
‘ಕ್ರೇಜಿ ಸ್ಟಾರ್’ ರವಿಚಂದ್ರನ್ (Ravichandran) ಅವರ ಕುಟುಂಬದಲ್ಲಿ ಶೋಕ ಮನೆ ಮಾಡಿದೆ. ಇಂದು (ಫೆ.28) ಮುಂಜಾನೆಯೇ ರವಿಚಂದ್ರನ್ ತಾಯಿ ಪಟ್ಟಮ್ಮಾಳ್ ವೀರಾಸ್ವಾಮಿ ಅವರು ನಿಧನ ಹೊಂದಿದರು. ಅವರ ಅಗಲಿಕೆಗೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿಯುತ್ತಿದ್ದಾರೆ. ರವಿಚಂದ್ರನ್ ಅವರ ರಾಜಾಜಿನಗರದ ನಿವಾಸದಲ್ಲಿ ಪಟ್ಟಮ್ಮಾಳ್ (Pattammal Veeraswamy) ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಡಾ. ರಾಜ್ಕುಮಾರ್ ಕುಟುಂಬ ಮತ್ತು ರವಿಚಂದ್ರನ್ ಕುಟುಂಬದ ನಡುವೆ ಮೊದಲಿನಿಂದಲೂ ಬಾಂಧವ್ಯ ಇದೆ. ಇಂದು ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಅವರು ಪಟ್ಟಮ್ಮಾಳ್ ಅವರ ಅಂತಿಮ ದರ್ಶನ ಪಡೆದರು. ‘ತಾಯಿಯನ್ನು ಕಳೆದುಕೊಂಡರೆ ಎಷ್ಟು ಕಷ್ಟ ಆಗುತ್ತದೆ ಎಂಬುದು ನಮಗೆ ಗೊತ್ತು. ನಾವು ಆ ನೋವನ್ನು ಅನುಭವಿಸಿದ್ದೇವೆ. ತಾಯಿ ಇದ್ದರೆ ಅದೊಂಥರಾ ಶಕ್ತಿ ನಮಗೆ. ಎಲ್ಲೋ ಇದ್ದಾರೆ ಅಂತ ಧೈರ್ಯ ಬರುತ್ತದೆ. ನಮಗೆ ರವಿಚಂದ್ರನ್ ಕುಟುಂಬ ತುಂಬ ಪರಿಚಯ. ರವಿಚಂದ್ರನ್ ಅವರ ತಾಯಿ ನಮ್ಮನ್ನು ಆಟ ಆಡಿಸಿದ್ದರು. ತಾಯಿ ಇಲ್ಲ ಎಂಬ ನೋವನ್ನು ರವಿಚಂದ್ರನ್ ಅವರು ಹೇಗೆ ತಡೆದುಕೊಳ್ಳುತ್ತಾರೋ ಗೊತ್ತಿಲ್ಲ. ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ’ ಎಂದು ರಾಘಣ್ಣ ಹೇಳಿದ್ದಾರೆ.
ಇದನ್ನೂ ಓದಿ:
Breaking News: ರವಿಚಂದ್ರನ್ ತಾಯಿ ನಿಧನ: ಪಟ್ಟಮ್ಮಾಳ್ ವೀರಸ್ವಾಮಿ ಇನ್ನಿಲ್ಲ