ಅಪ್ಪು ಹುಟ್ಟುಹಬ್ಬದಂದು ಇದೊಂದು ಕೆಲಸ ಮಾಡಿ: ರಾಘವೇಂದ್ರ ರಾಜ್​ಕುಮಾರ್ ಮನವಿ

|

Updated on: Mar 17, 2024 | 5:12 PM

Raghavendra Rajkumar: ಪುನೀತ್ ರಾಜ್​ಕುಮಾರ್ ಹುಟ್ಟುಹಬ್ಬದಂದು ಸಮಾಧಿಗೆ ಭೇಟಿ ನೀಡಿ ಕುಟುಂಬದೊಡನೆ ಸೇರಿ ಪೂಜೆ ಸಲ್ಲಿಸಿದ ರಾಘವೇಂದ್ರ ರಾಜ್​ಕುಮಾರ್, ಅಪ್ಪು ಹುಟ್ಟಿದ ದಿನದಂದು ಅವರ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿದ್ದಾರೆ.

ಪುನೀತ್ ರಾಜ್​ಕುಮಾರ್ (Puneeth Rajkumar) ಹುಟ್ಟುಹಬ್ಬದ ದಿನ ರಾಘವೇಂದ್ರ ರಾಜ್​ಕುಮಾರ್ ಅವರ ಕುಟುಂಬ ಇಂದು ಕಂಠೀರವ ಸ್ಟುಡಿಯೋಕ್ಕೆ ಭೇಟಿ ನೀಡಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ರಾಘವೇಂದ್ರ ರಾಜ್​ಕುಮಾರ್ ಅಭಿಮಾನಿಗಳ ಬಳಿ ಮನವಿಯೊಂದನ್ನು ಮಾಡಿದರು. ಅಪ್ಪು ದಿನ ಇವತ್ತು ಹುಟ್ಟಿದ ದಿನ ಸ್ಪೂರ್ತಿ ದಿನಕ್ಕೆ ಕಾರಣವಾಗಿದೆ, ಜನರ ಸುಖ ಸಂತೋಷದಲ್ಲಿ ಅಪ್ಪು ಕಾಣ್ತಾರೆ, ಅಪ್ಪುಗೆ ಎಲ್ಲರೂ ಶುಭಾಶಯ ತಿಳಿಸುತ್ತಾರೆ, ಅಪ್ಪು ಮೇಲಿನ‌ಪ್ರೀತಿಗಾಗಿ ಏನು ಬೇಕಾದರೂ ಮಾಡಿ, ಆದರೆ ಅದರ ಒಂದು ಭಾಗ ದಾನ ಧರ್ಮ ಅಂತ ಎತ್ತಿಡಿ. ಒಳ್ಳೆ ಕೆಲಸಗಳನ್ನು ಮಾಡಿದರೆ ಅಪ್ಪು ನಮ್ಮ ಜೊತೆಯೇ ಇರುತ್ತಾರೆ. ನಾನು ಕೂಡ ಮೊನ್ನೆ ‘ಜಾಕಿ’ ಸಿನಿಮಾ ನೋಡ್ದೆ, ಅಂತ ಕ್ರೇಜ್ ನನ್ನ ಜೀವನದಲ್ಲೇ ನೋಡಿಲ್ಲ, ಅಂತಹ ಅದೃಷ್ಟ ಇನ್ಯಾರಿಗೆ ಇರುತ್ತೆ ಹೇಳಿ..?, ಅಪ್ಪಾಜಿಯನ್ನ ದೇವರು ಮಾಡಿದ್ದೇ ಅಭಿಮಾನಿ ದೇವರುಗಳು , ಅಪ್ಪು ಅವರನ್ನು ಕೂಡ ದೇವರು ಮಾಡಿದ್ದು ಕೂಡ ಅಭಿಮಾನಿಗಳೇ, ಅಪ್ಪು ಅವರ ಜಾಗವನ್ನು ಯಾರೂ ತಗೋಳೋಕೆ ಆಗಲ್ಲ, ನನ್ನ ಮಗ ಯುವರಾಜ ಕುಮಾರ ಅವನೇ ಜಾಗ ಮಾಡಿಕೊಳ್ಳಬೇಕು, ಯುವ ರಾಜ್ ಕುಮಾರ್ ನಿಮ್ಮ ಪ್ರೀತಿ ಪಡ್ಕೊಂಡು ಬೆಳೆಯಬೇಕು, ಅಪ್ಪು ಸ್ಥಾನ ಪಡೆದುಕೊಳ್ಳಬೇಕು ಅಂದ್ರೆ ಅಷ್ಟು ಸುಲಭನಾ..?, ಪ್ರತಿಯೊಬ್ಬರೂ ಕೂಡ ಅಪ್ಪುನ ಪ್ರೀತಿ‌ಮಾಡ್ತಾರೆ, ನಾನು ಅಭಿಮಾನಿಗಳನ್ನು ನೋಡುತ್ತಾ ಸಂತೋಷವಾಗಿದ್ದೇನೆ, ಅಪ್ಪು ಅವರಿಗೆ ಅರೋಗ್ಯದ ಬಗ್ಗೆ ಬಹಳ ಕಾಳಜಿ ಇತ್ತು, ಹಾಗಾಗಿ ನೀವು ಕೂಡ ಅರೋಗ್ಯದ ಬಗ್ಗೆ ಜಾಗೂರೂಕರಾಗಿರಿ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ