ಪುನೀತ್​ ಜನ್ಮದಿನ: ಸಮಾಧಿ ಬಳಿ ಅಶ್ವಿನಿ ಯಾಕೆ ಬರಲಿಲ್ಲ? ಉತ್ತರಿಸಿದ ವಿನಯ್​

ಪುನೀತ್​ ಜನ್ಮದಿನ: ಸಮಾಧಿ ಬಳಿ ಅಶ್ವಿನಿ ಯಾಕೆ ಬರಲಿಲ್ಲ? ಉತ್ತರಿಸಿದ ವಿನಯ್​

ಮದನ್​ ಕುಮಾರ್​
|

Updated on:Mar 17, 2024 | 6:02 PM

ಇಂದು (ಮಾರ್ಚ್​ 17) ಪುನೀತ್​ ರಾಜ್​ಕುಮಾರ್​ ಸಮಾಧಿಗೆ ಡಾ. ರಾಜ್​ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸಲು ಸಮಾಧಿ ಬಳಿ ಬಂದಿದ್ದಾರೆ. ಆದರೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಬರಲು ಸಾಧ್ಯವಾಗಿಲ್ಲ. ಯಾಕೆ ಎಂಬ ಪ್ರಶ್ನೆಗೆ ವಿನಯ್ ರಾಜ್​ಕುಮಾರ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸಾವಿರಾರು ಅಭಿಮಾನಿಗಳು

ಇಂದು ಪುನೀತ್​ ರಾಜ್​ಕುಮಾರ್​ ಜನ್ಮದಿನವನ್ನು (Puneeth Rajkumar Birthday) ಅಭಿಮಾನಿಗಳು ಸಡಗರದಿಂದ ಆಚರಿಸುತ್ತಿದ್ದಾರೆ. ಅಪ್ಪು ನಮ್ಮೊಂದಿಗೆ ಇಲ್ಲ ಎಂಬ ನೋವಿನ ನಡುವೆಯೂ ವಿವಿಧ ಕಾರ್ಯಗಳನ್ನು ಮಾಡಲಾಗುತ್ತಿದೆ. ಡಾ. ರಾಜ್​ಕುಮಾರ್​ ಕುಟುಂಬದ ಸದಸ್ಯರು ಪುನೀತ್​ ಸಮಾಧಿ ಬಳಿ ಬಂದು ಪೂಜೆ ಮಾಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಕೂಡ ಇಲ್ಲಿಗೆ ಆಗಮಿಸಿ ಪುನೀತ್​ ರಾಜ್​ಕುಮಾರ್​ಗೆ ನಮನ ಸಲ್ಲಿಸಿದ್ದಾರೆ. ಆದರೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ (Ashwini Puneeth Rajkumar) ಅವರು ಇಂದು (ಮಾರ್ಚ್​ 17) ಅಪ್ಪು ಸಮಾಧಿ ಬಳಿ ಬಂದಿಲ್ಲ. ಯಾಕೆ ಎಂಬ ಪ್ರಶ್ನೆಗೆ ವಿನಯ್ ರಾಜ್​ಕುಮಾರ್​ ಉತ್ತರಿಸಿದ್ದಾರೆ. ‘ಅವರು ಊರಲ್ಲಿ ಇಲ್ಲ. ಹಾಗಾಗಿ ಅವರಿಗೆ ಬರೋಕೆ ಆಗಿಲ್ಲ. ನಾಳೆ ಅಥವಾ ನಾಡಿದ್ದು ಇಲ್ಲಿಗೆ ಬರುತ್ತಾರೆ’ ಎಂದು ವಿನಯ್​ ರಾಜ್​ಕುಮಾರ್ (Vinay Rajkumar) ಹೇಳಿದ್ದಾರೆ. ಮೂಲಗಳ ಪ್ರಕಾರ, ಅಶ್ವಿನಿ ರಾಜ್​ಕುಮಾರ್​ ಅವರು ತಮ್ಮ ಕುಲದೇವರಾದ ವಜ್ರೇಶ್ವರಿ ದೇವಸ್ಥಾನಕ್ಕೆ ತೆರಳಿದ್ದಾರೆ. ಆ ಕಾರಣದಿಂದ ಅವರು ಇಂದು ಅಪ್ಪು ಸಮಾಧಿಗೆ ಬಂದು ಪೂಜೆ ಸಲ್ಲಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Mar 17, 2024 06:01 PM