‘ನನ್ನ ಮಗನಲ್ಲವೇ, ನಿನಗೆಲ್ಲಿ ವಿದ್ಯೆ ಹತ್ತುತ್ತೆ ಎಂದು ಅಪ್ಪಾಜಿ ಹೇಳಿದ್ದರು’; ಹಳೆಯ ಘಟನೆ ನೆನೆದ ರಾಘಣ್ಣ

| Updated By: ರಾಜೇಶ್ ದುಗ್ಗುಮನೆ

Updated on: Oct 07, 2022 | 9:14 PM

ರಾಘವೇಂದ್ರ ರಾಜ್​ಕುಮಾರ್ ಅವರು ಬೆಂಗಳೂರು ಮೆಡಿಕಲ್ ಕಾಲೇಜ್​ಗೆ ಸೇರಿದ್ದರು. ನಂತರ ವರ್ಗಾವಣೆ ಮಾಡಿಕೊಂಡು ಮದ್ರಾಸ್​ಗೆ ತೆರಳಿದ್ದರು. ಅಲ್ಲಿ ಅವರಿಗೆ ಒಂಟಿತನ ಕಾಡೋಕೆ ಶುರುವಾಗಿತ್ತಂತೆ.

ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಪುನೀತ್ ಅವರನ್ನು ಕಳೆದುಕೊಂಡ ನೋವು ಬಹುವಾಗಿ ಅವರನ್ನು ಕಾಡುತ್ತಿದೆ. ರಾಘವೇಂದ್ರ ರಾಜ್​ಕುಮಾರ್ ಅವರು ಬೆಂಗಳೂರು ಮೆಡಿಕಲ್ ಕಾಲೇಜ್​ಗೆ ಸೇರಿದ್ದರು. ನಂತರ ವರ್ಗಾವಣೆ ಮಾಡಿಕೊಂಡು ಮದ್ರಾಸ್​ಗೆ ತೆರಳಿದ್ದರು. ಅಲ್ಲಿ ಅವರಿಗೆ ಒಂಟಿತನ ಕಾಡೋಕೆ ಶುರುವಾಗಿತ್ತಂತೆ. ಹೀಗಾಗಿ, ಮರಳಿ ಬೆಂಗಳೂರಿಗೆ ಬಂದು ನಟನೆ ಆರಂಭಿಸುವ ನಿರ್ಧಾರಕ್ಕೆ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ಬಂದಿದ್ದರು. ‘ನನ್ನ ಮಗನಲ್ಲವೇ, ನಿನಗೆಲ್ಲಿ ವಿದ್ಯೆ ಹತ್ತುತ್ತೆ ಎಂದು ಅಪ್ಪಾಜಿ ಹೇಳಿದ್ದರು’ ಎಂಬುದಾಗಿ ರಾಘಣ್ಣ ಹಳೆಯ ಘಟನೆ ನೆನೆದಿದ್ದಾರೆ.

Published on: Oct 07, 2022 08:19 PM