ಮೊದಲು ಆಚೆ ಹೋಗಿ ಎಂದು ತಳ್ಳಿದ್ದೆ; ಹಳೆ ಘಟನೆ ನೆನೆದ ರಘು ದೀಕ್ಷಿತ್

Edited By:

Updated on: Jul 31, 2023 | 10:46 AM

‘ಬ್ಯಾಂಗ್​’ ಚಿತ್ರದಲ್ಲಿ ಗಣೇಶ್​ ಪರಶುರಾಮ್​ ಡಾನ್​ ಪಾತ್ರ ಮಾಡಿದ್ದಾರೆ. ‘ಬ್ಯಾಂಗ್’ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ ಅವರು ಕೂಡ ನಟಿಸಿದ್ದಾರೆ. ಈ ಸಿನಿಮಾ ಆಫರ್ ಬಂದಾಗ ಮೊದಲು ನಟಿಸೋಕೆ ನೋ ಎಂದಿದ್ದರು ರಘು ದೀಕ್ಷಿತ್.

‘ಬ್ಯಾಂಗ್​’ ಚಿತ್ರಕ್ಕೆ ಗಣೇಶ್​ ಪರಶುರಾಮ್​ ನಿರ್ದೇಶನ ಮಾಡಿದ್ದಾರೆ. ರಘು ದೀಕ್ಷಿತ್ (Raghu Dixit) ಈ ಚಿತ್ರದಲ್ಲಿ ಡಾನ್​ ಪಾತ್ರ ಮಾಡಿದ್ದಾರೆ. ‘ಬ್ಯಾಂಗ್’ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ ಅವರು ಕೂಡ ನಟಿಸಿದ್ದಾರೆ. ಈ ಸಿನಿಮಾ ಆಫರ್ ಬಂದಾಗ ಮೊದಲು ನಟಿಸೋಕೆ ನೋ ಎಂದಿದ್ದರು ರಘು ದೀಕ್ಷಿತ್. ‘ಮ್ಯೂಸಿಕ್ ಕಂಪೋಸರ್ ಹೀರೋ ಆಗೋಕೆ ಸಾಧ್ಯನಾ? ಟೀಂನವರು ಮೊದಲು ಮನೆಗೆ ಬಂದಾಗ ಬಾಗಿಲು ತೋರಿಸಿ ಮೊದಲ ಆಚೆ ಹೋಗಿ ಎಂದು ತಳ್ಳಿದ್ದೆ’ ಎಂದು ಹಳೆ ಘಟನೆಯನ್ನು ಅವರು ನೆನಪಿಸಿಕೊಂಡಿದ್ದಾರೆ. ನಟನಾಗಿ ರಘು ದೀಕ್ಷಿತ್​ಗೆ ಇದು ಮೊದಲ ಸಿನಿಮಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Jul 31, 2023 08:13 AM
Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More