- Kannada News Photo gallery Shanvi Srivatsav Shares New Poster of Bang Movie And revealed the release date
ಹೊಸ ಸಿನಿಮಾ ಬಗ್ಗೆ ಭರ್ಜರಿ ಅಪ್ಡೇಟ್ ಕೊಟ್ಟ ನಟಿ ಶಾನ್ವಿ ಶ್ರೀವಾಸ್ತವ
ಶಾನ್ವಿ ಅವರು ‘ಬಾಂಗ್’ ಚಿತ್ರದಲ್ಲಿ ಗ್ಯಾಂಗ್ಸ್ಟರ್ ಪಾತ್ರ ಮಾಡಿದ್ದಾರೆ. ಇಷ್ಟು ದಿನ ಗಾಯಕ, ಸಂಗೀತ ಸಂಯೋಜಕ ಆಗಿದ್ದ ರಘು ದೀಕ್ಷಿತ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇದು ನಟನಾಗಿ ಅವರ ಮೊದಲ ಸಿನಿಮಾ.
Updated on: Jul 18, 2023 | 9:04 AM

ನಟಿ ಶಾನ್ವಿ ಶ್ರೀವಾಸ್ತವ ಅವರು ಹಲವು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಗಣೇಶ್ ಪರಶುರಾಮ್ ನಿರ್ದೇಶನ ಮಾಡುತ್ತಿರುವ ‘ಬ್ಯಾಂಗ್’ ಚಿತ್ರದಲ್ಲಿ ಶಾನ್ವಿ ಅಭಿನಯಿಸಿದ್ದಾರೆ. ಈ ಸಿನಿಮಾ ಬಗ್ಗೆ ಅಪ್ಡೇಟ್ ಸಿಕ್ಕಿದೆ.

ಶಾನ್ವಿ ಅವರು ಈ ಚಿತ್ರದಲ್ಲಿ ಗ್ಯಾಂಗ್ಸ್ಟರ್ ಪಾತ್ರ ಮಾಡಿದ್ದಾರೆ. ಇಷ್ಟು ದಿನ ಗಾಯಕ, ಸಂಗೀತ ಸಂಯೋಜಕ ಆಗಿದ್ದ ರಘು ದೀಕ್ಷಿತ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇದು ನಟನಾಗಿ ಅವರ ಮೊದಲ ಸಿನಿಮಾ.

ಶಾನ್ವಿ ಅವರು ಹೊಸ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾ ಆಗಸ್ಟ್ 18ರಂದು ತೆರೆಗೆ ಬರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಬ್ಯಾಂಗ್’ ಸಿನಿಮಾದಲ್ಲಿ ಶಾನ್ವಿ, ರಘು ದೀಕ್ಷಿತ್ ಮಾತ್ರವಲ್ಲದೆ ಇನ್ನೂ 4 ಪಾತ್ರಗಳು ಬರಲಿವೆ. ಅವುಗಳಿಗೆ ರಿತ್ವಿಕ್, ಸಾತ್ವಿಕಾ, ಮುರಳಿಧರ್, ಸುನೀಲ್ ನಾಟ್ಯರಂಗ ಬಣ್ಣ ಹಚ್ಚಿದ್ದಾರೆ.

ಶಾನ್ವಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಪೋಸ್ಟರ್ಗಳನ್ನು ಅವರು ಫ್ಯಾನ್ಸ್ಗಾಗಿ ಹಂಚಿಕೊಳ್ಳುತ್ತಾರೆ.

ಇತ್ತೀಚೆಗೆ ಶಾನ್ವಿ ಅವರು ಬೋಲ್ಡ್ ಫೋಟೋ ಒಂದನ್ನು ಹಂಚಿಕೊಂಡಿದ್ದರು. ಇದು ಎಲ್ಲರ ಗಮನ ಸೆಳೆದಿತ್ತು.

ಶಾನ್ವಿ ಹೊಸ ಫೋಟೋ ವೈರಲ್



















