ಚೊಚ್ಚಲ ಪಂದ್ಯದಲ್ಲೇ 10 ವಿಕೆಟ್ ಕಬಳಿಸಿದ ರಾಹುಲ್ ಚಹರ್

Updated on: Sep 28, 2025 | 12:02 PM

Hampshire vs Surrey: ಹ್ಯಾಂಪ್​ಶೈರ್ ಬ್ಯಾಟರ್​ಗಳ ಮುಂದೆ ಸ್ಪಿನ್ ಮೋಡಿ ಮಾಡಿದ ಚಹರ್ 24 ಓವರ್​ಗಳಲ್ಲಿ ಕೇವಲ 54 ರನ್ ನೀಡಿ 8 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಸರ್ರೆ ತಂಡಕ್ಕೆ 20 ರನ್​ಗಳ ರೋಚಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಚೊಚ್ಚಲ ಪಂದ್ಯದಲ್ಲೇ 10 ವಿಕೆಟ್ ಕಬಳಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ರಾಹುಲ್ ಚಹರ್ ತಮ್ಮದಾಗಿಸಿಕೊಂಡಿದ್ದಾರೆ.

ಭಾರತದ ಪರ ಸ್ಪಿನ್ನರ್ ರಾಹುಲ್ ಕೌಂಟಿ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದಾರೆ. ಸರ್ರೆ ತಂಡದ ಪರ ಕಣಕ್ಕಿಳಿದ ಚೊಚ್ಚಲ ಪಂದ್ಯದಲ್ಲೇ 10 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಸೌತಾಂಪಷ್ಟನ್​ನ ರೋಸ್ ಬೌಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಸರ್ರೆ ಹಾಗೂ ಹ್ಯಾಂಪ್​ಶೈರ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸರ್ರೆ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 147 ರನ್​ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಹ್ಯಾಂಪ್​ಶೈರ್ ತಂಡವು 248 ರನ್​ಗಳಿಸಿ ಆಲೌಟ್ ಆಗಿದೆ. ಈ ಇನಿಂಗ್ಸ್​ನಲ್ಲಿ 20.4 ಓವರ್​ಗಳನ್ನು ಎಸೆದ ರಾಹುಲ್ ಚಹರ್ 2 ವಿಕೆಟ್ ಕಬಳಿಸಿ ಮಿಂಚಿದ್ದರು.

ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಸರ್ರೆ ತಂಡ ಕಲೆಹಾಕಿದ್ದು ಬರೋಬ್ಬರಿ 281 ರನ್​ಗಳು. ಅದರಂತೆ 181 ರನ್​ಗಳ ಗುರಿ ಪಡೆದ ಹ್ಯಾಂಪ್​ಶೈರ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ರಾಹುಲ್ ಚಹರ್ ಯಶಸ್ವಿಯಾಗಿದ್ದಾರೆ.

ಹ್ಯಾಂಪ್​ಶೈರ್ ಬ್ಯಾಟರ್​ಗಳ ಮುಂದೆ ಸ್ಪಿನ್ ಮೋಡಿ ಮಾಡಿದ ಚಹರ್ 24 ಓವರ್​ಗಳಲ್ಲಿ ಕೇವಲ 54 ರನ್ ನೀಡಿ 8 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಸರ್ರೆ ತಂಡಕ್ಕೆ 20 ರನ್​ಗಳ ರೋಚಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಚೊಚ್ಚಲ ಪಂದ್ಯದಲ್ಲೇ 10 ವಿಕೆಟ್ ಕಬಳಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ರಾಹುಲ್ ಚಹರ್ ತಮ್ಮದಾಗಿಸಿಕೊಂಡಿದ್ದಾರೆ.

Published on: Sep 28, 2025 12:01 PM