ಜನ ನೀಡಿರುವ ಎರಡಕ್ಷದ ಬಿರುದಿಗೆ ಅನುಗುಣವಾಗಿ ರಾಹುಲ್ ಗಾಂಧಿ ಮಾತಾಡುತ್ತಾರೆ: ಸಿಟಿ ರವಿ

|

Updated on: Apr 27, 2024 | 1:45 PM

ಕಾಂಗ್ರೆಸ್ ನೇತೃತ್ವದ ಇಂಡಿಯ ಒಕ್ಕೂಟದಲ್ಲಿ ಪ್ರಧಾನಿಯಾಗುವ ಸಾಮರ್ಥ್ಯ ಯಾರಲ್ಲೂ ಇಲ್ಲ, ಅಸಲಿಗೆ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಅವರಲ್ಲಿ ಐಕ್ಯಮತವಿಲ್ಲ, ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ವಿರೋಧಿಸಿದ್ದಾರೆ ಎಂದು ಸಿಟಿ ರವಿ ಹೇಳಿದರು.

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರ (Rahul Gandhi) ಮಾತುಗಳಲ್ಲಿ ಸ್ಪಷ್ಟತೆ ಇಲ್ಲ, ಅವರು ಮಾತಾಡುವುದನ್ನು ಕೇಳುತ್ತಿದ್ದರೆ ಜನ ನೀಡಿರುವ ಬಿರುದು (sobriquet) ಸಮಂಜಸವಾಗಿದೆ ಅನಿಸುತ್ತದೆ, ವಿಷಯಗಳ ಬಗ್ಗೆ ಸ್ಪಷ್ಟತೆ ಇಲ್ಲದಾಗ ಅರ್ಥಹೀನ ಮಾತುಗಳು ಬರುತ್ತವೆ ಎಂದು ಹಿರಿಯ ಬಿಜೆಪಿ ನಾಯಕ ಸಿಟಿ ರವಿ (CT Ravi) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ರಾಹುಲ್ ಅವರಿಗೆ ತಮ್ಮ ಪಕ್ಷ ಕೇವಲ ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೂ ಅಲ್ಲಿಅ ಮುಖ್ಯಮಂತ್ರಿಗಳ ಹೆಸರುಗಳು ಗೊತ್ತಿರಲ್ಲ, ಪಕ್ಷದ ಅಧ್ಯಕ್ಷನನ್ನು ಮುಖ್ಯಮಂತ್ರಿ ಅನ್ನುತ್ತಾರೆ ಮತ್ತು ಮುಖ್ಯಮಂತ್ರಿಯನ್ನು ಅಧ್ಯಕ್ಷ ಅನ್ನುತ್ತಾರೆ ಎಂದು ರವಿ ಗೆಲಿ ಮಾಡಿದರು. ಅದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಡುವ ಪ್ರತಿ ಮಾತಿನಲ್ಲಿ ಸ್ಪಷ್ಟತೆ ಇದೆ, ಅವರು ನುಡಿದಂತೆ ನಡೆದಿದ್ದಾರೆ ಮತ್ತು ನಡೆದಂತೆ ನುಡಿದಿದ್ದಾರೆ ಎಂದು ರವಿ ಹೇಳಿದರು. ಕಾಂಗ್ರೆಸ್ ನೇತೃತ್ವದ ಇಂಡಿಯ ಒಕ್ಕೂಟದಲ್ಲಿ ಪ್ರಧಾನಿಯಾಗುವ ಸಾಮರ್ಥ್ಯ ಯಾರಲ್ಲೂ ಇಲ್ಲ, ಅಸಲಿಗೆ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಅವರಲ್ಲಿ ಐಕ್ಯಮತವಿಲ್ಲ, ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ವಿರೋಧಿಸಿದ್ದಾರೆ ಎಂದು ಸಿಟಿ ರವಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಂಸ್ಕೃತಿ ಗೊತ್ತಿಲ್ಲದವರಿಗೆ ಕನ್ನಡ ಸಂಸ್ಕೃತಿ ಇಲಾಖೆ ನೀಡಿದ್ದಾರೆ: ಮೋದಿ ಬಗ್ಗೆ ತಂಗಡಗಿ ಹೇಳಿಕೆಗೆ ಸಿಟಿ ರವಿ ತಿರುಗೇಟು