ಮುಂದಿನ ಪ್ರಧಾನಿ ಎಂದು ಸಿದ್ದರಾಮಯ್ಯ ಹೇಳುವ ರಾಹುಲ್ ಗಾಂಧಿ ಆಧಾರರಹಿತ ಆರೋಪ ಮಾಡುತ್ತಾರೆ: ಕುಮಾರಸ್ವಾಮಿ

|

Updated on: May 03, 2024 | 6:12 PM

ಇಂಡಿಯ ಒಕ್ಕೂಟದ ಮುಖ್ಯಸ್ಥರಲ್ಲಿ ಒಬ್ಬರಾಗಿರುವ ರಾಹುಲ್ ಗಾಂಧಿ ನಿನ್ನೆ ಶಿವಮೊಗ್ಗದಲ್ಲಿ; ಪ್ರಜ್ವಲ್ 400 ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದಾನೆ ಅಂತ ಹೇಳುತ್ತಾರೆ. ಆಧಾರರಹಿತ ಆರೋಪಗಳನ್ನು ಮಾಡುವ ಇಂಥವರನ್ನು ಅವರು ಪ್ರಧಾನ ಮಂತ್ರಿ ಅಭ್ಯರ್ಥಿ ಅಂತ ಪ್ರೊಜೆಕ್ಟ್ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.   

ರಾಯಚೂರು: ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಕಾಂಗ್ರೆಸ್ ನಾಯಕರ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ನಾಯಕರೆಲ್ಲ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು (PM Narendra Modi) ಪ್ರಶ್ನೆ ಮಾಡುತ್ತಾರೆ, ಎರಡು ತಿಂಗಳು ಕಾಲ ಪೆನ್ ಡ್ರೈವ್ ಗಳನ್ನು (pendrive) ತಮ್ಮಲ್ಲಿಟ್ಟುಕೊಂಡವರಿಗೆ ಪ್ರಧಾನಿಯವರನ್ನು ಪ್ರಶ್ನಿಸುವ ಹಕ್ಕಿಲ್ಲ, ಅವು ಸಿಕ್ಕ ತಕ್ಷಣ ಪ್ರಧಾನಿಯವರಿಗೆ ಮಾಹಿತಿ ನೀಡಿದ್ದರೆ ಅದು ಬೇರೆಯಾಗಿರುತಿತ್ತು ಎಂದು ಹೇಳಿದ ಕುಮಾರಸ್ವಾಮಿ ಇವರ ಉದ್ದೇಶ ಸ್ಪಷ್ಟವಾಗಿದೆ, 7 ನೇ ತಾರೀಖು ನಡೆಯುವ ಎರಡನೇ ಸುತ್ತಿನ ಮತದಾನದಲ್ಲಿ ಜನರ ದಾರಿ ತಪ್ಪಿಸುವುದು ಇವರಿಗೆ ಬೇಕಾಗಿತ್ತು ಎಂದರು. ಇವರು ಹಂಚಿಕೆ ಮಾಡಿರುವ ಕ್ಲಿಪ್ ಗಳಲ್ಲಿ ಪ್ರಜ್ವಲ್ ಮುಖವೇ ಕಾಣೋದಿಲ್ಲ, ತಾನು ಅವುಗಳನ್ನು ನೋಡಿಲ್ಲ ಅದರೆ ನೋಡಿದರು ಬಂದು ತನಗೆ ತಿಳಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ಇಂಡಿಯ ಒಕ್ಕೂಟದ ಮುಖ್ಯಸ್ಥರಲ್ಲಿ ಒಬ್ಬರಾಗಿರುವ ರಾಹುಲ್ ಗಾಂಧಿ ನಿನ್ನೆ ಶಿವಮೊಗ್ಗದಲ್ಲಿ; ಪ್ರಜ್ವಲ್ 400 ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದಾನೆ ಅಂತ ಹೇಳುತ್ತಾರೆ. ಆಧಾರರಹಿತ ಆರೋಪಗಳನ್ನು ಮಾಡುವ ಇಂಥವರನ್ನು ಅವರು ಪ್ರಧಾನ ಮಂತ್ರಿ ಅಭ್ಯರ್ಥಿ ಅಂತ ಪ್ರೊಜೆಕ್ಟ್ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:  ಅಂದು ಕುಮಾರಸ್ವಾಮಿ ಪ್ರಜ್ವಲ್​ದು ತಪ್ಪಿದ್ರೆ ಕ್ಷಮಿಸಿ ಅಂದಿದ್ದು ಇದೇ ತಪ್ಪಿಗಾ? ಎಟಿ ರಾಮಸ್ವಾಮಿ ಪ್ರಶ್ನೆ