ಅಪೆಕ್ಸ್ ಕೋರ್ಟ್ ತೀರ್ಪು; ರಾಹುಲ್ ಗಾಂಧಿ ಸದನದಲ್ಲಿ ಮಾತಾಡುವುದನ್ನು ತಡೆಯಲು ಬಿಜೆಪಿ ಸರ್ಕಾರ ರೂಪಿಸಿದ ಸಂಚು ಬಯಲಾಗಿದೆ: ದಿನೇಶ್ ಗುಂಡೂರಾವ್

|

Updated on: Aug 04, 2023 | 4:59 PM

ಕೆಳ ನ್ಯಾಯಾಲಯ ಯಾಕೆ ಎರಡು ವರ್ಷ ಶಿಕ್ಷೆ ವಿಧಿಸಿದೆ ಅನ್ನೋದು ಅರ್ಥವಾಗಿಲ್ಲ ಅಂತ ಸರ್ವೋಚ್ಛ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿರುವುದು ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸರ್ಕಾರ ರೂಪಿಸಿದ ಷಡ್ಯಂತ್ರ ಬಯಲಿಗೆ ಬರುತ್ತದೆ ಎಂದು ದಿನೇಶ್ ಹೇಳಿದರು.

ದೆಹಲಿ: ಮೋದಿ ಉಪನಾಮಕ್ಕೆ (Modi Surname) ಸಂಬಂಧಿಸಿದಂತೆ ರಾಹುಲ್ ಗಾಂಧಿ (Rahul Gandhi) ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತಿನ ಕೆಳ ನ್ಯಾಯಾಲಯವೊಂದು ವಿಧಿಸಿದ ಎರಡು ವರ್ಷ ಸೆರೆವಾಸ ಶಿಕ್ಷೆಗೆ ಸಂಬಂಧಿಸಿದಂತೆ ಸುಪ್ರೀಮ್ ಕೋರ್ಟ್ (Supreme Court) ಮಧ್ಯಂತರ ತಡೆಯಾಜ್ಞೆ ನೀಡಿದ್ದು ಕಾಂಗ್ರೆಸ್ ನಾಯಕರನ್ನು ಅತೀವ ಸಂತೋಷಗೊಳಿಸಿದೆ. ಅಪೆಕ್ಸ್ ಕೋರ್ಟಿನ ತೀರ್ಪನ್ನು ಸ್ವಾಗತಿಸಿ ದೆಹಲಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao), ಕೆಳ ನ್ಯಾಯಾಲಯ ಯಾಕೆ ಎರಡು ವರ್ಷ ಶಿಕ್ಷೆ ವಿಧಿಸಿದೆ ಅನ್ನೋದು ಅರ್ಥವಾಗಿಲ್ಲ ಅಂತ ಸರ್ವೋಚ್ಛ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿರುವುದು ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸರ್ಕಾರ ರೂಪಿಸಿದ ಷಡ್ಯಂತ್ರ ಬಯಲಿಗೆ ಬರುತ್ತದೆ ಎಂದು ದಿನೇಶ್ ಹೇಳಿದರು. ರಾಹುಲ್ ಬಾಯಿ ಮುಚ್ಚಿಸಲು, ಅವರು ಸದನದಲ್ಲಿ ಮಾತಾಡದಂತೆ ತಡೆಯಲು ಮತ್ತು ಅವರನ್ನು ಅವಮಾನಿಸಲು ಬಿಜೆಪಿ ಸರ್ಕಾರ ಮಸಲತ್ತು ನಡೆಸಿತ್ತು ಎಂದು ಜನಸಾಮಾನ್ಯನಿಗೂ ಈಗ ಗೊತ್ತಾಗಿದೆ ಎಂದು ದಿನೇಶ್ ಹೇಳಿದರು. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ಸಂಪೂರ್ಣ ಜಯ ಸಿಕ್ಕೇ ಸಿಗುತ್ತೆ ಅಂತ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ