ಸಂಸತ್ತಿನಲ್ಲಿ ಫ್ಲೈಯಿಂಗ್ ಕಿಸ್; ರಾಹುಲ್ ಗಾಂಧಿ ವರ್ತನೆ ಬಾಲಿಶ ಮತ್ತು ಹೇವರಿಕೆ ಹುಟ್ಟಿಸುವಂಥದ್ದು: ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

|

Updated on: Aug 10, 2023 | 11:48 AM

ಸಂಸತ್ತಿನಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ; ಸಚಿವೆ ಸ್ಮೃತಿ ಇರಾನಿ ಭಾಷಣದ ಬಳಿಕ ಅವರ ಮತ್ತು ಮಹಿಳಾ ಸಂಸದರ ಕಡೆ ನೋಡುತ್ತಾ ಫ್ಲೈಯಿಂಗ್ ಕಿಸ್ ನೀಡಿದ್ದು ದುರ್ನಡತೆ ಮತ್ತು ಅಹಂಕಾರದ ಪರಮಾಧಿ ಎಂದು ಶೋಭಾ ಕರಂದ್ಲಾಜೆ ಹೇಳಿದರು

ನವದೆಹಲಿ: ಸಂಸತ್ ಭವನದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಪ್ರದರ್ಶಿಸಿದ ವರ್ತನೆ, ಬಾಲಿಶ, ಸಂಸತ್ತಿನ (Parliament) ಘನತೆ-ಗೌರವ ಹಾಗೂ ಮಹಿಳಾ ಸಮುದಾಯಕ್ಕೆ ಅವಮಾನಿಸುವಂಥದ್ದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲೆ ಬುಧವಾರ ಸಂಸತ್ತಿನಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ; ಸಚಿವೆ ಸ್ಮೃತಿ ಇರಾನಿ ಭಾಷಣ ಮಾಡಿದ ಬಳಿಕ ಎಲ್ಲರೂ ಎದ್ದು ಹೊರಡುವಾಗ ಅವರ ಮತ್ತು ಮಹಿಳಾ ಸಂಸದರ ಕಡೆ ನೋಡುತ್ತಾ ಫ್ಲೈಯಿಂಗ್ ಕಿಸ್ ನೀಡಿದ್ದು ದುರ್ನಡತೆ ಮತ್ತು ಅಹಂಕಾರದ ಪರಮಾಧಿ ಎಂದು ಶೋಭಾ ಕರಂದ್ಲಾಜೆ ಹೇಳಿದರು. ಯುವಕರು, ಮಹಿಳೆಯರು, ಮಕ್ಕಳು ಟಿವಿಗಳ ಮುಂದೆ ಕೂತು ರಾಹುಲ್ ಗಾಂಧಿ ವರ್ತನೆ ನೋಡಿ ದುಃಖಿಸಿರುತ್ತಾರೆ ಎಂದು ಸಚಿವೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 11:47 am, Thu, 10 August 23

Follow us on