ಭ್ರಷ್ಟಾಚಾರ ಆರೋಪ; ವ್ಯಕ್ತಿಗತ ಟೀಕೆ ಮಾಡಲ್ಲ, ಪೂರ್ತಿ ಸಿದ್ದರಾಮಯ್ಯ ಸರ್ಕಾರ ರಾಜೀನಾಮೆ ನೀಡಬೇಕು: ಗೋವಿಂದ ಕಾರಜೋಳ, ಬಿಜೆಪಿ ನಾಯಕ
ಅಧಿಕಾರಕ್ಕೆ ಕೇವಲ ಮೂರು ತಿಂಗಳ ಆವಧಿಯಲ್ಲಿ ಸಿದ್ದರಾಮಯ್ಯ ಸರ್ಕಾಕದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾಮಗಾರಿಗಳನ್ನು ನಡೆಸಿರುವ ಗುತ್ತಿಗೆದಾರರು ಮಾಡುತ್ತಿದ್ದಾರೆ. ಬಿಲ್ ಗಳನ್ನು ಬಿಡುಗಡೆ ಮಾಡಲು ಕಮೀಶನ್ ಕೇಳಲಾಗುತ್ತಿದೆ ಎಂದು ಅವರು ಆರೋಪಿಸುತ್ತಿದ್ದಾರೆ.
ಬಾಗಲಕೋಟೆ: ಇಡೀ ಸರ್ಕಾರದ ವಿರುದ್ಧ ಲಂಚಗುಳಿತನದ (corruption) ಆರೋಪ ಕೇಳಿಬಂದಿರುವುದರಿಂದ ಸಿದ್ದರಾಮಯ್ಯ ಸರ್ಕಾರ (Siddaramaiah Government) ಕೂಡಲೇ ರಾಜೀನಾಮೆ ನೀಡಬೇಕೆಂದು ಮಾಜಿ ಸಚಿವ ಗೋವಿಂದ ಕಾರಜೋಳ (Govind Karjol) ಹೇಳಿದರು, ಬಾಗಲಕೋಟೆಯಲ್ಲಿ ಗುರುವಾರ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಕಾರಜೋಳ ತಾನು ವ್ಯಕ್ತಿಗತವಾಗಿ ಯಾರ ಮೇಲೂ ಟೀಕೆ ಮಾಡೋದಿಲ್ಲ, ಅದರೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಸಚಿವ ಸಂಪುಟ ಅಧಿಕಾರ ತ್ಯಜಿಸಬೇಕು ಎಂದು ಹೇಳಿದರು. ಭ್ರಷ್ಟಾಚಾರ ನಡೆದಿಲ್ಲ, ರಾಜೀನಾಮೆ ನೀಡೋದಿಲ್ಲ ಅಂತ ಸರ್ಕಾರದ ಪ್ರತಿನಿಧಿಗಳು ಹೇಳಿದರೆ ಅದು ಭಂಡತನದ ಮಾತಾಗುತ್ತದೆ, ಆರೋಪಗಳು ಎದುರಾದಾಗ, ಅದನ್ನು ಸ್ವಾಗತಿಸಿ ತನಿಖೆ ಮಾಡಿಸಲು ಮುಂದಾಗಬೇಕು ಎಂದು ಗೋವಿಂದ ಕಾರಜೋಳ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ