ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ನೀಡಿದ ಸಾಮೂಹಿಕ ನಾಯಕತ್ವ ಸಂದೇಶ ಕಾರ್ಯರೂಪ ತಳೆಯುತ್ತಿದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 03, 2022 | 8:46 PM

ಶಾಲು ಹೊದಿಸುವ ಸಂದರ್ಭದಲ್ಲಿ ನಡೆಯುವ ಒಂದು ಸೂಕ್ಷ್ಮವನ್ನು ಗಮನಿಸಿ. ಹಾಗೆ ನೋಡಿದರೆ ಪಾದಯಾತ್ರೆ ಶಿವಕುಮಾರ ಅವರ ನೇತೃತ್ವದಲ್ಲಿ ನಡೆದ ಕಾರಣ ಮಠಾಧೀಶರರನ್ನು ಸನ್ಮಾನಿಸುವ ಕಾರ್ಯ ಅವರೇ ಆರಂಭಿಸಿದ್ದರೆ ಯಾರದ್ದೇ ತಕರಾರು ಇರುತ್ತಿರಲಿಲ್ಲ.

ಮೇಕೆದಾಟು ಯೋಜನೆ (Mekedatu Project) ಶೀಘ್ರ ಅನುಷ್ಠಾನಕ್ಕಾಗಿ ಕಾಂಗ್ರೆಸ್ ನಡೆಸಿದ ಎರಡು ಹಂತದ ಪಾದಯಾತ್ರೆ ಹಲವು ವಿವಾದ, ಆಡಳಿತ ಪಕ್ಷದ ಟೀಕೆ ಮತ್ತು ಅಸಂಖ್ಯಾತ ಟ್ರಾಫಿಕ್ ಜಾಮ್ಗಳೊಂದಿಗೆ (traffic snarls) ಕೊನೆಗೊಂಡಿದೆ. ಗುರುವಾರ ಸಾಯಂಕಾಲ ಬೆಂಗಳೂರು ಬಸವನಗುಡಿಯಲ್ಲಿರುವ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶವೊಂದನ್ನು (convention) ಪಕ್ಷ ಆಯೋಜಿಸಿದೆ. ಗುರುವಾರ ಕೆಲ ಮಠಾಧೀಶರು (pontiffs) ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಗೆ ಆನೆಬಲ ಸಿಕ್ಕಂತಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಮತ್ತು ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯನವರು, ಮಠಾಧೀಶರನ್ನು ಕಾವಿ ಶಾಲು ಹೊದಿಸಿ ಸನ್ಮಾನಿಸಿದರು.

ಶಾಲು ಹೊದಿಸುವ ಸಂದರ್ಭದಲ್ಲಿ ನಡೆಯುವ ಒಂದು ಸೂಕ್ಷ್ಮವನ್ನು ಗಮನಿಸಿ. ಹಾಗೆ ನೋಡಿದರೆ ಪಾದಯಾತ್ರೆ ಶಿವಕುಮಾರ ಅವರ ನೇತೃತ್ವದಲ್ಲಿ ನಡೆದ ಕಾರಣ ಮಠಾಧೀಶರರನ್ನು ಸನ್ಮಾನಿಸುವ ಕಾರ್ಯ ಅವರೇ ಆರಂಭಿಸಿದ್ದರೆ ಯಾರದ್ದೇ ತಕರಾರು ಇರುತ್ತಿರಲಿಲ್ಲ. ಆದರೆ ಶಿವಕುಮಾರ ಹಾಗೆ ಮಾಡದೆ ಆ ಗೌರವವನ್ನು ತಮ್ಮ ಪಕ್ಕದಲ್ಲಿರುವ ಸಿದ್ದರಾಮಯ್ಯನವರಿಗೆ ನೀಡುತ್ತಾರೆ. ಅದಾದ ಮೇಲೆ ಅವರು ಬೇರೆ ಶ್ರೀಗಳಿಗೆ ಶಾಲು ಹೊದಿಸುತ್ತಾರೆ.

ಶಿವಕುಮಾರ ಮತ್ತು ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯಗಳಿರುವುದು ಒಂದು ಸಾರ್ವಜನಿಕ ಗುಟ್ಟು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ರಾಹುಲ್ ಗಾಂಧಿ ಅವರು ಮುಸುಕಿನ ಗುದ್ದಾಟದ ಬಗ್ಗೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿ ಮುಂದಿನ ವಿಧಾನ ಸಭೆ ಚುನಾವಣೆಗೆ ಸಾಮೂಹಿಕ ನಾಯಕತ್ವದ ಅವಶ್ಯಕತೆ ಇದೆ ಅಂತ ಹೇಳಿದ್ದಾರಂತೆ.

ಈ ವಿಡಿಯೋನಲ್ಲಿ ಶಿವಕುಮಾರ ಮತ್ತು ಸಿದ್ದರಾಮಯ್ಯ ಜೊತೆ ಎಮ್ ಬಿ ಪಾಟೀಲ, ಈಶ್ವರ ಖಂಡ್ರೆ, ಗೋವಿಂದರಾಜ ಮೊದಲಾದವರು ಸಹ ಕಾಣಿಸುತ್ತಾರೆ. ಅದರೆ ಅವರಲ್ಲಿ ಯಾರಿಗೂ ಶಾಲು ಹೊದಿಸುವ ಭಾಗ್ಯ ಸಿಗುವುದಿಲ್ಲ.

ಇದನ್ನೂ ಓದಿ:  ಮೇಕೆದಾಟು ಯೋಜನೆ ಪಾದಯಾತ್ರೆಯಲ್ಲಿ ‘ಹಲ್ಲುಕಿರಿ’ ಕಾಂಗ್ರೆಸ್ ನಾಯಕನಿಗೆ ಸತ್ಕಾರ ಮತ್ತು ಮೆರವಣಿಗೆ!!