ರಾಯಚೂರು: ಶಾಲೆಗೆ ಚಕ್ಕರ್ ಹೊಡೆದು ಬಾರಿಗೆ ಹಾಜರಾದ ಹಟ್ಟಿ ಸರ್ಕಾರಿ ಪ್ರೌಢಶಾಲೆಯ ಐವರು ಶಿಕ್ಷಕರ ವಿರುದ್ಧ ಶಿಸ್ತುಕ್ರಮ
ವಿಷಯ ರಾಯಚೂರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ-ನಿರ್ದೇಶಕರಿಗೆ ಗೊತ್ತಾಗಿದ್ದು ಅವರು ಈ ಅಶಿಸ್ತಿನ ಶಿಕ್ಷಕರ ಮೇಲೆ ಶಿಸ್ತುಕ್ರಮ ಜರುಗಿಸಲು ಶಿಫಾರಸ್ಸು ಮಾಡಿದ್ದಾರೆ.
ರಾಯಚೂರು: ಮದ್ಯಪಾನ (consuming liquor) ಮಾಡುವುದು ವ್ಯಕ್ತಿಯೊಬ್ಬನ ವೈಯಕ್ತಿಕ ವಿಚಾರ. ಆದರೆ, ಕರ್ತವ್ಯಕ್ಕೆ ಹಾಜರಾಗುವ ಸಮಯದಲ್ಲಿ ಬಾರ್ ಗೆ ಹೋಗಿ ಕುಡಿಯುತ್ತಾ ಕೂತರೆ ಹೇಗೆ ಸ್ವಾಮಿ? ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಹಟ್ಟಿ (Hutti) ಪಟ್ಟಣದಲ್ಲಿರುವ ಸರ್ಕಾರೀ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮುರಳೀಧರ ರಾವ್ ಕುಲಕರ್ಣಿ (Muralithar Rao Kulkarni), ಸಹಶಿಕ್ಷಕರಾದ ಲಿಂಗಪ್ಪ ಪೂಜಾರ್, ಕೇಶವ್ ಕುಮಾರ್, ಅಬ್ದುಲ್ ಅಜೀಜ್, ಚನ್ನಪ್ಪ ರಾಠೋಡ್ ಮೊದಲಾದವರು ಡಿಸೆಂಬರ್ 22 ರಂದು ಶಾಲೆ ಹೋಗುವ ಬದಲು ಬಾರೊಂದರಲ್ಲಿ ಕುಳಿತು ಸುರಾಪಾನ ಮಾಡಿದ್ದಾರೆ. ವಿಷಯ ರಾಯಚೂರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ-ನಿರ್ದೇಶಕರಿಗೆ ಗೊತ್ತಾಗಿದ್ದು ಅವರು ಈ ಅಶಿಸ್ತಿನ ಶಿಕ್ಷಕರ ಮೇಲೆ ಶಿಸ್ತುಕ್ರಮ ಜರುಗಿಸಲು ಶಿಫಾರಸ್ಸು ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ