ರಾಯಚೂರು: ಬಿಸಿಲ ಝಳಕ್ಕೆ ಪೊಲೀಸ್ ಶ್ವಾನಗಳು ಕಂಗಾಲು: ಏರ್ ಕೂಲರ್ ವ್ಯವಸ್ಥೆ ಮಾಡಿ ಮಕ್ಕಳಂತೆ ಆರೈಕೆ ಮಾಡ್ತಿರುವ ಸಿಬ್ಬಂದಿ
ರಾಯಚೂರಿನಲ್ಲಿ ಹೆಚ್ಚಿದ ತಾಪಮಾನದಿಂದ ಪೊಲೀಸ್ ಶ್ವಾನಗಳು ಬಳಲುತ್ತಿವೆ. ಅವುಗಳ ಆರೋಗ್ಯ ರಕ್ಷಣೆಗೆ ಜಿಲ್ಲಾ ಪೊಲೀಸ್ ಇಲಾಖೆ ಏರ್ ಕೂಲರ್, ಫ್ಯಾನ್ ವ್ಯವಸ್ಥೆ ಮಾಡಿದೆ. ಪ್ರತಿನಿತ್ಯ ಮೊಸರು, ಮಜ್ಜಿಗೆ, ಎಳನೀರು, ತಂಪಾದ ನೀರು ನೀಡಲಾಗುತ್ತಿದ್ದು, ಮಾಸಿಕ ಪಶುವೈದ್ಯಕೀಯ ತಪಾಸಣೆ ಹಾಗೂ ಲಸಿಕೆ ನೀಡಲಾಗುತ್ತಿದೆ. ಶ್ವಾನಗಳ ಆರೈಕೆಗೆ ಸಿಬ್ಬಂದಿ ವಿಶೇಷ ಕಾಳಜಿ ವಹಿಸಿದ್ದಾರೆ.
ರಾಯಚೂರು, ಏಪ್ರಿಲ್ 24: ರಾಯಚೂರು ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಅತಿ ಹೆಚ್ಚು ತಾಪಮಾನದಿಂದ ಪೊಲೀಸ್ ಶ್ವಾನಗಳ ಆರೋಗ್ಯಕ್ಕೆ ಧಕ್ಕೆಯಾಗದಂತೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಜಿಲ್ಲಾ ಪೊಲೀಸ್ ಇಲಾಖೆಯು ತಮ್ಮ ಶ್ವಾನದಳಕ್ಕೆ ಬಿಸಿಲಿನಿಂದ ರಕ್ಷಣೆ ಒದಗಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಶ್ವಾನಗಳಿರುವ ಕೊಠಡಿಗಳಲ್ಲಿ ಏರ್ ಕೂಲರ್‌ಗಳು ಮತ್ತು ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಸದ್ಯ ರಾಯಚೂರಿನಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಿದೆ. ಈ ಉಷ್ಣಾಂಶದಿಂದ ಶ್ವಾನಗಳಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂಬ ಕಾರಣಕ್ಕೆ ಪ್ರತಿದಿನ ಅವುಗಳಿಗೆ ಎಳನೀರು, ಮೊಸರು, ಮಜ್ಜಿಗೆ ಹಾಗೂ ತಣ್ಣೀರು ನೀಡಲಾಗುತ್ತಿದೆ.
ಜಿಆರ್ ಸಿಬ್ಬಂದಿಗಳು ಪುಟಾಣಿ ಮಕ್ಕಳಂತೆ ಶ್ವಾನಗಳ ಆರೈಕೆ ಮಾಡುತ್ತಿದ್ದಾರೆ. ಅವುಗಳ ಆರೋಗ್ಯದಲ್ಲಿ ಯಾವುದೇ ಏರುಪೇರಾಗದಂತೆ ಕ್ಷಣಕ್ಷಣವೂ ನಿಗಾ ವಹಿಸಲಾಗುತ್ತಿದೆ ಎಂದು ರಾಯಚೂರು ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಶು ಗಿರಿ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಇಟಲಿ ಪ್ರಧಾನಿ ಮೆಲೋನಿ
ರಾಜ್ಯ SC ST ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ
‘ಅಮೆರಿಕ ಅಮೆರಿಕ 2’ ಸಿನಿಮಾ ನೋಡಿ ಮೆಚ್ಚಿಕೊಂಡ ಸುಧಾ ಮೂರ್ತಿ
ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ: ಸಾರಾ ಗೋವಿಂದು ಪ್ರತಿಕ್ರಿಯೆ

