ರಾಯಚೂರಿನಿಂದ ಗದ್ವಾಲ್​ಗೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಮೂವರ ಬಂಧನ

ಅರುಣ್​ ಕುಮಾರ್​ ಬೆಳ್ಳಿ

Updated on: Jun 19, 2025 | 11:20 AM

ಪೊಲೀಸರು ತಪಾಸಣೆಗೆಂದು ಬಂದಾಗ ಅಕ್ಕಿ ಸಾಗಿಸುತ್ತಿದ್ದ ಖದೀಮರು ಅಮಾಯಕರಂತೆ ನಟಿಸಿದ್ದಾರೆ. ವಾಹನದ ಚಾಲಕ ಮತ್ತು ಅವನ ಪಕ್ಕದಲ್ಲಿ ಕೂತಿರುವವ ವಾಹನದಲ್ಲಿ ಬೇರೇನೋ ಇದೆ ನಂಬಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಪೊಲೀಸರು ಚೆಕ್ ಮಾಡಿದಾಗ 41 ಅಕ್ಕಿಮೂಟೆಗಳು ಪತ್ತೆಯಾಗಿವೆ. ಗದ್ವಾಲ್ ಪಟ್ಟಣವು ರಾಯಚೂರಿನಿಂದ ಸುಮಾರು 40 ಕಿಮೀ ದೂರವಿದ್ದು ಅದು ತೆಲಂಗಾಣ ರಾಜ್ಯಕ್ಕೆ ಸೇರಿದೆ.

ರಾಯಚೂರು, ಜೂನ್ 19: ಅನ್ನ ಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಖದೀಮರು ಕಾಳಸಂತೆಯಲ್ಲಿ (black-market) ಅಕ್ರಮವಾಗಿ ಮಾರಾಟ ಮಾಡೋದು ಹೊಸತೇನೂ ಅಲ್ಲ. ರಾಜ್ಯದ ಎಲ್ಲ ಭಾಗಗಳಲ್ಲಿ ಇದು ನಡೆಯುತ್ತದೆ. ರಾಯಚೂರಲ್ಲಿ ಇಂದು ಮಂತ್ರಾಲಯ ಮಾರ್ಗವಾಗಿ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ಮೂವರನ್ನು ನಗರದ ನೇತಾಜಿನಗರ ಪೊಲೀಸರು ದಾಳಿ ನಡೆಸಿ ಹಿಡಿದಿದ್ದಾರೆ. ಅರೋಪಿಗಳನ್ನು ತೆಲಂಗಾಣ ಗದ್ವಾಲ್ ಮೂಲದ ರಾಜೇಶ್, ರಮೇಶ್ ಮತ್ತು ಶಿವರಾಜ್ ಎಂದು ಗುರುತಿಸಲಾಗಿದೆ. ಅವರು ಅಕ್ಕಿ ಸಾಗಿಸುತ್ತಿದ್ದ ಸರಕು ಸಾಗಣೆ ವಾಹನದಲ್ಲಿ 41 ಅಕ್ಕಿ ಮೂಟೆಗಳು ಪತ್ತೆಯಾಗಿವೆ.

ಇದನ್ನೂ ಓದಿ:  ಚಳ್ಳಕೆರೆಯಿಂದ ಗುಜರಾತಿಗೆ ಆಕ್ರಮವಾಗಿ ಸಾಗಿಸುತ್ತಿದ್ದ 25 ಸಾವಿರ ಕೆಜಿ ಪಡಿತರ ಅಕ್ಕಿ ಜಪ್ತಿ: ತಮಿಳುನಾಡಿನ ಇಬ್ಬರ ಬಂಧನ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.