ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಎಸ್ಪಿ​

Edited By:

Updated on: Jan 29, 2026 | 7:48 PM

ರಾಯಚೂರು ಜಿಲ್ಲೆಯ ಸಿಂಧನೂರು ಉಪವಿಭಾಗದ ಕವಿತಾಳ ಪೊಲೀಸ್ ಠಾಣೆಯಲ್ಲಿ 2026ರ ಜನವರಿ 21ರಂದು ಗಂಭೀರ ಕೊಲೆ ಪ್ರಕರಣ ವರದಿಯಾಗಿದೆ. ನಾಲ್ಕು ತಿಂಗಳ ಗರ್ಭಿಣಿ 24 ವರ್ಷದ ಶ್ರೀಮತಿ ರೇಖಾ ಅವರನ್ನು ಅವರ ಮಾವ ಶ್ರೀ ಸಿದ್ದಪ್ಪ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಆರೋಪಿ ಸಿದ್ದಪ್ಪ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ರಾಯಚೂರು, ಜನವರಿ 29: ಜಿಲ್ಲೆಯ ಸಿರವಾರ ತಾಲೂಕಿನ ಚಿಕ್ಕಹಣಗಿ ಗ್ರಾಮದಲ್ಲಿ ಬುಧವಾರ ಗರ್ಭಿಣಿ ಸೊಸೆಯನ್ನು ಮಾವ ಕತ್ತು ಸೀಳಿ‌ ಕೊಲೆಗೈದಿದ್ದ ಘಟನೆ ನಡೆದಿತ್ತು. ಸದ್ಯ ಆರೋಪಿ ಮಾವ ಸಿದ್ದಪ್ಪನನ್ನು ಕವಿತಾಳ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ರಾಯಚೂರು ಎಸ್​​ಪಿ ಮಾತನಾಡಿದ್ದು, ಸೊಸೆ ರೇಖಾ ಮತ್ತು ಸಿದ್ದಪ್ಪ ನಡುವೆ ಹಿಂದಿನಿಂದಲೂ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಗರ್ಭಿಣಿ ಹಿನ್ನೆಲೆ ರೇಖಾ ತಮ್ಮ ಪೋಷಕರ ಮನೆಗೆ ಬಂದಿದ್ದರು. ನಿನ್ನೆ ಸಿದ್ದಪ್ಪ, ರೇಖಾರ ಮನೆಗೆ ಬಂದು ಚಾಕುವಿನಿಂದ ಇರಿದು ರೇಖಾ ಅವರನ್ನು ಕೊಲೆ ಮಾಡಿದ್ದ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jan 29, 2026 07:48 PM
Follow Us
Bhemesh Poojar

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More