ರಾಯಚೂರು ಮಳೆ: ದಡದತ್ತ ದಂಡೆತ್ತಿ ಬಂದ ಮೊಸಳೆ ದಂಡು, ವಿಡಿಯೋ ನೋಡಿದರೆ ಎದೆ ಝಲ್ಲೆನ್ನುತ್ತದೆ!
ತೆಪ್ಪದಲ್ಲಿ ಸ್ಥಳೀಯರು ಸಂಚರಿಸುವ ವೇಳೆ ಮೊಸಳೆಗಳು ದಾಳಿ ನಡೆಸಿ ಹೆಚ್ಚು ಕಡಿಮೆ ಆದ್ರೆ ಆ ಜೀವಗಳಿಗೆ ಯಾರು ಹೊಣೆ? ಈಗಲಾದ್ರು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಭಾಗದ ಜನರ ಕಷ್ಟ ಆಲಿಸಬೇಕಿದೆ..
ಅಲ್ಲಿ ಮಳೆ ಪ್ರಮಾಣ ಹೆಚ್ಚಾಗ್ತಿರೊ ಹಿನ್ನೆಲೆ ಮೊಸಳೆಗಳ ದಂಡೇ ದಡದತ್ತ ದಂಡೆತ್ತಿ ಬಂದಿವೆ..ನದಿ ದಡದಲ್ಲಿ ಕೃಷಿ ಮಾಡೋ ರೈತರು, ತೆಪ್ಪದಲ್ಲಿ ಓಡಾಡೋ ಮಕ್ಕಳು,ವೃದ್ಧರು ಜೀವ ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ..ಇದೇ ಭಯದ ಬೆನ್ನಲ್ಲೇ ಈಗ ಆ ಊರಲ್ಲಿ 20 ಮೊಸಳೆಗಳ ಹಿಂಡೆ ಬೀಡುಬಿಟ್ಟಿದೆ..
ಹೌದು..ರಾಜ್ಯದೆಲ್ಲೆಡೆ ಮಳೆ ಅಬ್ಬರಿಸಿ ಬೊಬ್ಬರಿಯುತ್ತಿದೆ..ಇತ್ತ ಇಷ್ಟು ದಿನ ಸೈಲೆಂಟ್ ಆಗಿದ್ದ ಮಳೆರಾಯ ಈಗ ರಾಯಚೂರು ಜಿಲ್ಲೆಯಲ್ಲೂ ಅಬ್ಬರಿಸಲು ಶುರು ಮಾಡಿದ್ದಾನೆ..ಮತ್ತೊಂದು ಕಡೆ ಮಾಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಹೆಚ್ಚಾಗಿರೋದ್ರಿಂದ ಬಾಗಲಕೋಠೆಯ ಆಲಮಟ್ಟಿ ಜಲಾಶಯಕ್ಕೆ ನೀರು ಹರಿಬಿಡಲಾಗಿತ್ತು..ಇದರ ಬೆನ್ನಲ್ಲೇ ಈಗ ಅಲ್ಲಿಂದ ಯಾದಗಿರಿಯ ಬಸವಸಾಗರ ಜಲಾಶಯಕ್ಕೆ ನೀರು ಬಿಡಲಾಗಿದೆ..ನಿನ್ನೆಯಿಂದ ಈಗ ಬಸವಸಾಗರ ಜಲಾಶಯದಿಂದ ಹೆಚ್ಚುವರಿ ನೀರಲ್ಲ ಬಿಡಲಾಗಿದ್ದು ರಾಯಚೂರು ಜಿಲ್ಲೆಯ ಲಿಂಗಸುಗೂರು,ದೇವದುರ್ಗ ಹಾಗೂ ರಾಯಚೂರು ತಾಲ್ಲೂಕಿನ ವ್ಯಾಪ್ತಿ ಅಲರ್ಟ್ ಮಾಡಲಾಗಿದೆ..ಕೃಷ್ಣಾ ನದಿ ತಿರದ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಸಿಲು ಸೂಚಿಸಲಾಗಿದೆ..ಈ ಮಧ್ಯೆ ರಾಯಚೂರು ತಾಲ್ಲೂಕಿನ ಆತ್ಕೂರು ಗ್ರಾಮದ ಕೃಷ್ಣಾ ನದಿ ತೀರದಲ್ಲಿ 20 ಕ್ಕು ಹೆಚ್ಚು ಮೊಸಳೆಗಳ ದಂಡು ಒಂದೇ ಕಡೆ ಬಂದು ಕೂತಿದ್ವು..ಆ ವಿಡಿಯೋ ವೈರಲ್ ಆಗಿತ್ತು..ಈಗ ಆ ಪ್ರದೇಶದಲ್ಲಿ ಓಡಾಡದಂತೆ ಸೂಚಿಸಲಾಗಿದೆ..ಆತ್ಕೂರು ಬಳಿಯ ಕುರುಕವಕಲಾ ನಡುಗಡ್ಡೆ ಪ್ರದೇಶಕ್ಕೆ ಬ್ರಿಡ್ಜ್ ಇಲ್ಲದಿರೋದ್ರಿಂದ ಸಾಕಷ್ಟು ಸಮಸ್ಯೆ ಆಗ್ತಿದೆಯಂತೆ..
ಹೌದು..ಕೃಷ್ಣಾ ನದಿ ತೀರದಲ್ಲಿ ಹರಿದು ಹೆಚ್ಚಾಗ್ತಿರೋದ್ರಿಂದ ಮೊಸಳೆಗಳು ಆಹಾರಕ್ಕಾಗಿ ನದಿ ದಡದತ್ತ ಬರ್ತಿವೆ..ರಾಯಚೂರು ತಾಲ್ಲೂಕಿನ ಆತ್ಕೂರು,ಕುರುವಕಲ ಸೇರಿ ನಾಲ್ಕೈದು ಹಳ್ಳಿಗಳ ಜನರ ಸ್ಥಿತಿ ಮಳೆ ಬಂದಾಗ ಅಯೋಮಯವಾಗುತ್ತೆ..ಒಂದೊಂದು ಕಡೆ ಒಂದೊ,ಎರಡೋ ಮೊಸಳೆಗಳಿದ್ರೆ, ಮತ್ತೊಂದು ಕಡೆ ಹತ್ತಾರು ಮೊಸಳೆಗಳ ದಂಡೆ ಬೀಡು ಬಿಟ್ಟಿರತ್ತೆ..ಹೀಗೆ ನದಿ ತೀರದಲ್ಲಿರೊ ಮೊಸಳೆಗಳು ಆಹಾರವನ್ನರಸಿ ಮೇಯಲು ಬರುವ ಜಾನುವಾರುಗಳು,ಅವುಗಳ ಜೊತೆಗಿರೊ ಜನರ ಮೇಲೆ ಅಟ್ಯಾಕ್ ಮಾಡುತ್ತಿವೆಯಂತೆ..ಇನ್ನು ಈ ಭಾಗದಲ್ಲಿ ನದಿ ತೀರದಲ್ಲಿ ಜಮೀನು ಹೊಂದಿರೊ ರೈತರು ವ್ಯವಸಾಯಕ್ಕಾಗಿ ಇದೇ ಕೃಷ್ಣಾ ನದಿ ತೀರಕ್ಕೆ ಬರಬೇಕು..ಒಮ್ಮೆಮ್ಮೆ ಇಂಥ ರೈತರ ಮೇಲೆಯೇ ದಾಳಿ ನಡೆಸಿವೆಯಂತೆ..ಮತ್ತೊಂದು ಕಡೆ ಒಂದು ಬದಿಯಿಂದ ಮತ್ತೊಂದು ಬದಿ ತೆಪ್ಪಗಳಲ್ಲಿ ತೆರಳೊ ಜನರ ಮೇಲೂ ಮೊಸಳೆಗಳು ದಾಳಿ ನಡೆಸೋ ಸಾಧ್ಯತೆ ಇದೆಯಂತೆ..ನಿತ್ಯ ಜೀವ ಭಯದಲ್ಲೇ ಓಡಾಡ್ತಿದ್ದಿವಿ ಅಂತಾರೆ ಸ್ಥಳೀಯರು..
ಅದೆನೆ ಇರ್ಲಿ ಈಗಲಾದ್ರು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಭಾಗದ ಜನರ ಕಷ್ಟ ಆಲಿಸಬೇಕಿದೆ..ಇಲ್ದಿದ್ರೆ ಮಕ್ಕಳು,ವೃದ್ಧರು ಸೇರಿ ಇಲ್ಲಿನ ಜನ ಕಷ್ಟದಲ್ಲಿಯೇ ಜೀವನ ಕಳೆಯೋ ದುಸ್ಥಿತಿ ಜೀವಂತವಾಗಿಯೇ ಇರತ್ತೆ..ಒಂದೊಮ್ಮೆ ತೆಪ್ಪದ ಸಂಚಾರದ ವೇಳೆ ಮೊಸಳೆಗಳು ದಾಳಿ ನಡೆಸಿ ಹೆಚ್ಚು ಕಡಿಮೆ ಆದ್ರೆ ಆ ಜೀವಗಳಿಗೆ ಯಾರು ಹೊಣೆ..