ರಾಯಚೂರು: ಫೋಟೊಶೂಟ್ ನೆಪದಲ್ಲಿ ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!

Updated By: Ganapathi Sharma

Updated on: Jul 12, 2025 | 9:17 AM

ಪತ್ನಿಯೇ ಪತಿಯನ್ನು ಸೇತುವೆಯಿಂದ ಕೆಳಕ್ಕೆ ದೂಡಿ ಹಾಕಿದ ಘಟನೆ ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಮ್ ಬ್ಯಾರೇಜ್‌ನಲ್ಲಿ ನಡೆದಿದೆ. ಆದರೆ ನಂತರ ಯಾರೂ ಊಹಿಸದ ರೀತಿಯಲ್ಲಿ ಪ್ರಕರಣ ತಿರುವು ಪಡೆದಿದೆ. ಹಾಗಾದರೆ, ಪತಿಯನ್ನು ಪತ್ನಿ ನದಿಗೆ ತಳ್ಳಿದ್ದೇಕೆ? ಆಮೇಲೆ ಏನಾಯ್ತು? ವಿಡಿಯೋ ಇಲ್ಲಿದೆ ನೋಡಿ.

ರಾಯಚೂರು, ಜುಲೈ 12: ರಾಯಚೂರಿನಲ್ಲಿ ಮಹಿಳೆಯೊಬ್ಬರು ಪತಿಯನ್ನೇ ನದಿಗೆ ತಳ್ಳಿದ ಘಟನೆ ನಡೆದಿದೆ. ಪತಿಯನ್ನು ಪುಸಲಾಯಿಸಿ ರಾಯಚೂರು ತಾಲ್ಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್​​​ಗೆ ಕರೆದುಕೊಂಡು ಬಂದ ಮಹಿಳೆ ಫೋಟೊಶೂಟ್ ಮಾಡಿದ್ದಾರೆ. ಬಿಡ್ಜ್ ಮೇಲೆ ನಿಂತು ಮೊದಲು ತಾನು ಫೋಟೊ ತೆಗೆಸಿಕೊಂಡಿದ್ದ ಪತ್ನಿ ನಂತರ ಪತಿಯಲ್ಲಿ ಬ್ರಿಡ್ಜ್ ತುದಿಗೆ ಹೋಗಿ ನಿಲ್ಲಲು ಹೇಳಿದ್ದಾರೆ. ಇದೇ ವೇಳೆ, ಬಿಡ್ಜ್ ಅಂಚಿನಲ್ಲಿದ್ದ ಪತಿಯನ್ನು ಕೆಳಕ್ಕೆ ತಳ್ಳಿದ್ದಾಳೆ. ಸದ್ಯ ಕೃಷ್ಣಾ ನದಿಯಲ್ಲಿ ಹರಿವು ಹೆಚ್ಚಿರುವುದರಿಂದ ವ್ಯಕ್ತಿ ಸ್ವಲ್ಪ ದೂರ ಕೊಚ್ಚಿಕೊಂಡು ಹೋಗದ್ದಾರೆ. ಆದರೆ, ಈಜು ಚೆನ್ನಾಗಿ ಬರುತ್ತಿದ್ದುದರಿಂದ ಬಚಾವಾಗಿದ್ದಾರೆ. ಈಜಿಕೊಂಡು ಹೋಗಿ ನದಿ ಮಧ್ಯ ಭಾಗದ ಬಂಡೆಯೊಂದರ ಮೇಲೆ ಕುಳಿತಿದ್ದಾರೆ.

ವ್ಯಕ್ತಿಯ ಕಿರುಚಾಟ ಕೇಳಿ ಅಕ್ಕ ಪಕ್ಕದ ಜನರು ಸ್ಥಳಕ್ಕೆ ಆಗಮಿಸಿ, ಜಮೀನುಗಳಲ್ಲಿದ್ದ ಹಗ್ಗದ ಮೂಲಕ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ನಂತರ, ಆ ವ್ಯಕ್ತಿ, ಪತ್ನಿಯೇ ಕೆಳಕ್ಕೆ ತಳ್ಳಿದ್ದಳು ಎಂದು ಆರೋಪಿಸಿದ್ದಾರೆ. ಆದರೆ, ಗಂಡನೇ ಕಾಲು ಜಾರಿ ಬಿದ್ದಿದ್ದಾರೆ ಎಂದು ಮಹಿಳೆ ಹೇಳಿದ್ದಾಳೆ.

ಕೆಲ ಪ್ರತ್ಯಕ್ಷದರ್ಶಿಗಳು ಪತ್ನಿಯೇ ಆತನನ್ನು ನದಿಗೆ ತಳ್ಳಿದ್ದಾಗಿ ಹೇಳಿದ್ದಾರೆ. ಸದ್ಯ, ಪೊಲೀಸರಿಗೆ ಮಾಹಿತಿ ರವಾನೆಯಾಗುವ ಭಯದಲ್ಲಿ ಮಹಿಳೆಯು ತರಾತುರಿಯಲ್ಲಿ ಪತಿಯನ್ನು ಪುಸಲಾಯಿಸಿ ಕರೆದೊಯ್ದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ