Mishap near Anand Rao Circle: ಕಾಂಕ್ರೀಟ್ ಮಿಕ್ಸರ್ ವಾಹನದ ಮೇಲೆ ಬಿದ್ದ ರೇಲ್ವೇ ಹೈಟ್ ಬ್ಯಾರಿಯರ್, ತಪ್ಪಿದ ಭಾರೀ ಅನಾಹುತ

|

Updated on: Mar 29, 2023 | 11:11 AM

ಆನಂದ್ ರಾವ್ ಸರ್ಕಲ್ ಬಳಿ ರೇಲ್ವೇ ಗೇಟ್ ಬ್ಯಾರಿಯರ್ ಗೆ ಕಾಂಕ್ರೀಟ್ ಮಿಕ್ಸರ್ ವಾಹನವೊಂದು ಬುಧವಾರ ಬೆಳಗ್ಗೆ ಸ್ಪರ್ಶಿಸಿದಾಗ ಸ್ಲ್ಯಾಬ್ ವಾಹನದ ಮೇಲೆ ಕುಸಿದ ಘಟನೆ ಜರುಗಿದೆ.

ಬೆಂಗಳೂರು: ರೇಲ್ವೇ ಹೈಟ್ ಬ್ಯಾರಿಯರ್ ಗಳನ್ನು (railway height barrier) ನಗರ ಹಲವು ಭಾಗಗಳಲ್ಲಿ ಅಳವಡಿಸಲಾಗಿದೆ. ಶೇಷಾದ್ರಿಪುರಂ ವಿವಿ ಗಿರಿ ಕಾಲೋನಿಗೆ ಹತ್ತಿರದ ಆನಂದ್ ರಾವ್ ಸರ್ಕಲ್ (Anand Rao Circle) ಬಳಿ ಅಂಥದ್ದೊಂದು ಬ್ಯಾರಿಯರ್ ಗೆ ಕಾಂಕ್ರೀಟ್ ಮಿಕ್ಸರ್ ವಾಹನವೊಂದು ಬುಧವಾರ ಬೆಳಗ್ಗೆ ಸ್ಪರ್ಶಿಸಿದಾಗ ಸ್ಲ್ಯಾಬ್ ವಾಹನದ ಮೇಲೆ ಕುಸಿದ ಘಟನೆ ಜರುಗಿದೆ. ಯಾವುದೇ ಪ್ರಾಣಾಪಾಯ ಜರುಗದಿರುವುದು ಅದೃಷ್ಟವೆಂದು ಘಟನೆ ನಡೆದಾಗ ಅಲ್ಲೇ ಇದ್ದ ಆಟೋ ರಿಕ್ಷಾ ಚಾಲಕರೊಬ್ಬರು ಟಿವಿ9 ವರದಿಗಾರನೊಂದಿಗೆ ಮಾತಾಡುವಾಗ ಹೇಳಿದ್ದಾರೆ. ರೇಲ್ವೇ ಅಂಡರ್ ಪಾಸ್ ಗಳಿರುವೆಡೆ (railway underpass) ಇಂಥ ಬ್ಯಾರಿಯರ್ ಗಳನ್ನು ಅಳವಡಿಸಲಾಗಿರುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 29, 2023 11:11 AM