ತುಮಕೂರು, ಚಿತ್ರದುರ್ಗ, ಪಾವಗಡ, ಬೆಳಗಾವಿ, ಅಂಕೋಲಾ ರೈಲು ಮಾರ್ಗದ ಬಗ್ಗೆ ಚರ್ಚೆ, ಸಚಿವ ವಿ.ಸೋಮಣ್ಣ ಮಾಹಿತಿ
ರೇಲ್ವೆ ಇಲಾಖೆಯ ಸಾಮಾನ್ಯ ಸಭೆ ನಡೆಸಲು ಹುಬ್ಬಳ್ಳಿಗೆ ಬಂದಿದ್ದೇನೆ. ಹಳ್ಳಿಗಾಡಿನ ಜನರ ಸಂಪರ್ಕ ಸೇವೆಯಾಗಿ ರೇಲ್ವೆ ಕೆಲಸ ಮಾಡಬೇಕೆಂಬ ನನ್ನ ಆಸೆ ಇದೆ. ತುಮಕೂರು, ಚಿತ್ರದುರ್ಗ, ದಾವಣಗೆರೆ, ಪಾವಗಡ, ಬೆಳಗಾವಿ, ಅಂಕೋಲಾ ರೈಲು ಮಾರ್ಗ ವಿಸ್ತರಿಸಲಾಗುತ್ತೆ. ಮೀಟಿಂಗ್ ನಂತರ ಎಲ್ಲವೂ ತಿಳಿಸುತ್ತೇವೆ ಎಂದು ರೈಲ್ವೆ ಸಚಿವ ವಿ ಸೋಮಣ್ಣ ತಿಳಿಸಿದರು.
ಹುಬ್ಬಳ್ಳಿಗೆ ಕೇಂದ್ರ ರೈಲ್ವೇ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಭೇಟಿ ನೀಡಿದ್ದು ತುಮಕೂರು, ಚಿತ್ರದುರ್ಗ, ಪಾವಗಡ, ಬೆಳಗಾವಿ, ಅಂಕೋಲಾ ರೈಲು ಮಾರ್ಗ ಸಂಬಂಧ ಮಾತನಾಡಿದ್ದಾರೆ. ರೇಲ್ವೆ ಇಲಾಖೆಯ ಸಾಮಾನ್ಯ ಸಭೆ ನಡೆಸಲು ಹುಬ್ಬಳ್ಳಿಗೆ ಬಂದಿದ್ದೇನೆ. ಹುಬ್ಬಳ್ಳಿಯ ಸಿದ್ದರೂಢರ ದರ್ಶನ ಪಡೆದಿದ್ದೇನೆ. ಹಳೆಯ ಕಾಲದ ನೆನಪುಗಳ ಅವಶ್ಯಕತೆ ಇಲ್ಲ, ನಮಗೆ ಕೆಲಸದ ಅವಶ್ಯಕತೆ ಇದೆ. ಹಳ್ಳಿಗಾಡಿನ ಜನರ ಸಂಪರ್ಕ ಸೇವೆಯಾಗಿ ರೇಲ್ವೆ ಕೆಲಸ ಮಾಡಬೇಕೆಂಬ ನನ್ನ ಆಸೆ ಇದೆ. ತುಮಕೂರು, ಚಿತ್ರದುರ್ಗ, ದಾವಣಗೆರೆ, ಪಾವಗಡ, ಬೆಳಗಾವಿ, ಅಂಕೋಲಾ ರೈಲು ಮಾರ್ಗ ವಿಸ್ತರಿಸಲಾಗುತ್ತೆ. ಮೀಟಿಂಗ್ ನಂತರ ಎಲ್ಲವೂ ತಿಳಿಸುತ್ತೇವೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ