ಬೆಂಗಳೂರು: ರೈಲಿನಡಿ ಬೀಳುತ್ತಿದ್ದವನ ದೇವರಂತೆ ಬಂದು ರಕ್ಷಿಸಿದ ಸಿಬ್ಬಂದಿ, ಇಲ್ಲಿದೆ ವಿಡಿಯೋ

Updated on: Jun 24, 2025 | 11:17 AM

ಸಿನಿಮೀಯ ಘಟನೆಯೊಂದರಲ್ಲಿ, ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೊರಟಿದ್ದ ರೈಲು ಏರಲು ಹೋಗಿ ಬಿದ್ದ ಪ್ರಯಾಣಿಕರೊಬ್ಬರನ್ನು ರೈಲ್ವೆ ಇಲಾಖೆ ಸಿಬ್ಬಂದಿ ಹಾಗೂ ಮಾಜಿ ಸೈನಿಕ ದೇವರಂತೆ ಕಾಪಾಡಿದ ವಿದ್ಯಮಾನಕ್ಕೆ ಬೆಂಗಳೂರಿನ ಕೆಆರ್​​ ಪುರಂ ರೈಲು ನಿಲ್ದಾಣ ಸಾಕ್ಷಿಯಾಗಿದೆ. ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ.

ಬೆಂಗಳೂರು, ಜೂನ್ 24: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅಡಿಗೆ ಬೀಳುತ್ತಿದ್ದ ಪ್ರಯಾಣಿಕನೊಬ್ಬನನ್ನು ರೈಲ್ವೆ ಇಲಾಖೆ ಸಿಬ್ಬಂದಿ ಹಾಗೂ ಮಾಜಿ ಸೈನಿಕ ದೇವರಂತೆ ಬಂದು ರಕ್ಷಿಸಿದ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೆಂಗಳೂರಿನ ಕೆಆರ್​​ ಪುರಂ ರೈಲು ನಿಲ್ದಾಣದಲ್ಲಿ ಸೋಮವಾರ ರಾತ್ರಿ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೊರಟಿದ್ದ ರೈಲು ವೇಗ ಪಡೆದುಕೊಂಡಿತ್ತು. ಅಷ್ಟರಲ್ಲಿ ಪ್ರಯಾಣಿಕನೊಬ್ಬ ಆಯತಪ್ಪಿ ಬಿದ್ದಿದ್ದು, ರೈಲು ಆತನನ್ನೆಳೆದುಕೊಂಡೇ ಸಾಗುತ್ತಿತ್ತು. ಇನ್ನೇನು ಆತ, ರೈಲಿನಡಿ ಬೀಳಬೇಕು ಎನ್ನುವಷ್ಟರಲ್ಲಿ ಮಾಜಿ ಸೈನಿಕ ಸತೀಶ್ ಮತ್ತು ರೈಲ್ವೆ ಸಿಬ್ಬಂದಿ ಪ್ರದೀಪ್ ಕುಮಾರ್ ಆತನನ್ನು ಎಳೆದು ರಕ್ಷಣೆ ಮಾಡಿದ್ದಾರೆ. ಸದ್ಯ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಿಸಿಟಿವಿ ವಿಡಿಯೋ ಇಲ್ಲಿದೆ.

ವಿಡಿಯೋ, ವರದಿ: ವಿಕಾಸ್, ಟಿವಿ9, ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jun 24, 2025 11:16 AM