ಮೈಸೂರಿನ ಹಲವೆಡೆ ಆಲಿಕಲ್ಲು ಮಳೆ: ವರ್ಷದ ಮೊದಲ ಮಳೆಗೆ ಜನ ಖುಷ್
ಕರ್ನಾಟಕದ ಹಲವೆಡೆ ಬೇಸಗೆ ಮಳೆ ಶುರುವಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಹಲವೆಡೆ ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತುಸು ತಂಪೆರೆದಿದೆ. ಇದೀಗ ಮೈಸೂರು ಜಿಲ್ಲೆಯಲ್ಲೂ ಮಳೆಯಾಗಿದೆ. ಸೋಮವಾರ ಸಂಜೆ ಹಾಗೂ ರಾತ್ರಿ ಸುರಿದ ಭರ್ಜರಿ ಮಳೆ ಜನರನ್ನು ಹರ್ಷಚಿತ್ತರನ್ನಾಗಿಸಿದೆ.
ಮೈಸೂರು, ಮಾರ್ಚ್ 18: ಮೈಸೂರು ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆ ಹಾಗೂ ರಾತ್ರಿ ಭರ್ಜರಿ ಮಳೆಯಾಗಿದೆ. ಹುಣಸೂರು, ಕೆಆರ್ ನಗರ, ಹೆಚ್ಡಿ ಕೋಟೆ, ಟಿ ನರಸೀಪುರದಲ್ಲಿ ಮಳೆಯಾಗಿದೆ. ಹುಣಸೂರಿನಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಿದೆ. ಹುಣಸೂರು ನಗರಸಭೆ ಆವರಣದಲ್ಲಿ ಸುಂಟರಗಾಳಿ ಹಾಗೂ ಮಳೆಯಾಗಿದೆ. ಕೆಆರ್ ನಗರದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಜನರು ಪಾತ್ರೆಗಳು, ಬಕೆಟ್‌ನಲ್ಲಿ ಆಲಿಕಲ್ಲು ಸಂಗ್ರಹಿಸಿದ್ದು ಕಂಡುಬಂತು.