ಕೈಕೊಟ್ಟ ವಿದ್ಯುತ್: ಹಳ್ಳಿ ಮಂದಿ ಮೊಬೈಲ್‌ ಚಾರ್ಜ್‌ ಮಾಡಿಕೊಳ್ಳಲು ಹೆಂಗ್ ಮುಗಿಬಿದ್ದವ್ರೇ ನೋಡಿ

|

Updated on: May 28, 2024 | 5:08 PM

ಯಾದಗಿರಿ ಜಿಲ್ಲೆಯಾದ್ಯಂತ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಗ್ರಾಮೀಣ ಭಾಗದಲ್ಲಿ ವಿದ್ಯುತ್​ ಕಂಬಗಳು ನೆಲಕ್ಕೆ ಉರುಳಿ ಬಿದ್ದಿವೆ. ಪರಿಣಾಮ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್​ ಇಲ್ಲದಂತಾಗಿದೆ. ಇದರಿಂದ ಜನರು ಗ್ರಾಮದ ಒಂದು ಕಡೆ ಎಲ್ಲರೂ ಸೇರಿಕೊಂಡು ಡೀಸೆಲ್ ಇಂಜಿನ್ ಮೂಲಕ ತಮ್ಮ ಮೊಬೈಲ್​​ ಚಾರ್ಜ್​ ಮಾಡಿಕೊಳ್ಳಲು ಮುಗಿದಿದ್ದಾರೆ. ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದೆ.

ಯಾದಗಿರಿ, (ಮೇ 28): ಯಾದಗಿರಿ ಜಿಲ್ಲೆಯಲ್ಲಿ ಗಾಳಿ ಸಹಿತ ಭಾರಿ ಮಳೆಯಾಗಿದ್ದು, ಇದರಿಂದ ಭಾರೀ ಅವಾಂತರ ಸೃಷ್ಟಿಯಾಗಿದೆ. ಭಾರಿ ಮಳೆಗೆ ಎಲ್ಲೊಂದರಲ್ಲಿ ವಿದ್ಯುತ್​ ಕಂಬಗಳು ಧರೆಗುರುಳಿದು ಬಿದ್ದಿದ್ದು, ಪರಿಣಾಮ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ನಾಲ್ವಾಡಗಿ, ಬಲ್ಕಲ್, ಮರಮಕಲ್​ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ವಿದ್ಯುತ್ ಕಡಿತವಾಗಿದ್ದರಿಂದ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಗ್ರಾಮೀಣ ಭಾಗದ ಜನ ಪರದಾಡುತ್ತಿದ್ದಾರೆ. ಮೊಬೈಲ್​ ಇಲ್ಲದೇ ಏನು ಇಲ್ಲ ಎಂದು ಕೊನೆಗೆ ಫೋನ್ ಚಾರ್ಜ್​ ಮಾಡಿಕೊಳ್ಳಲೆಂದೇ ಗ್ರಾಮದ ಒಂದು ಸ್ಥಳದಲ್ಲೇ ಡಿಸೇಲ್ ಇಂಜೀನ್ ಆನ್ ಮಾಡಿದ್ದು, ಇದರ ಮೂಲಕ ಇದೀಗ ಜನರು ಮೊಬೈಲ್​ ಚಾರ್ಜ್​ ಹಾಕಿಕೊಳ್ಳಲು ಮುಗಿಬಿದ್ದಿದ್ದಾರೆ. ವಿದ್ಯುತ್ ಪೂರೈಕೆ ಆಗದ್ದಕ್ಕೆ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಲೇ ಒಂದೆ ಕಡೆ ನೂರಾರು ಮೊಬೈಲ್ ಗಳನ್ನ ಚಾರ್ಜ್ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಈ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 28, 2024 05:07 PM