ರಣ ಬಿಸಿಲಿಂದ ಬಸವಳಿದಿದ್ದ ಕೋಲಾರದ ಕೆಜಿಎಫ್ ನಲ್ಲಿ ಮಳೆಯ ಸಿಂಚನ, ಜನರಲ್ಲಿ ಕೊಂಚ ನಿರಾಳತೆ

|

Updated on: May 02, 2024 | 5:49 PM

ಸುಡು ಬಿಸಿಲಿನಿಂದ ರಕ್ಷಣೆ ಪಡೆಯಲು ಕೊಡೆಗಳನ್ನು ಹಿಡಿದು ಮನೆಯಿಂದ ಹೊರಬಿದ್ದಿದ್ದ ಜನ ಮಳೆಯಿಂದ ನೆನೆಯದಿರಲು ಅವುಗಳನ್ನು ಬಳಸಿದರು! ನಮಗೆಲ್ಲ ಗೊತ್ತಿರುವಂತೆ ಕಳೆದೆರಡು ವಾರಗಳಿಂದ ರಾಜ್ಯದ ನಾನಾ ಭಾಗಗಳಲ್ಲಿ ಮಳೆಯಾಗುತ್ತಿದೆ. ಅದರೆ ಎಲ್ಲೆಡೆ ಸಾಧಾರಣ ಪ್ರಮಾಣದ ಮಳೆಗಳು ಅನ್ನೋದು ಸಮಾಧಾನ ಮೂಡಿಸದ ಅಂಶ.

ಕೋಲಾರ: ಕಳೆದ ಮಾನ್ಸೂನ್ ಸೀಸನಲ್ಲಿ (monsoon season) ರಾಜ್ಯದ ಜನರಿಗೆ ಮಳೆ ಮರೀಚಿಕೆಯಾಗಿದ್ದು ಮರೆಯಲಾದೀತೇ? ಭಾರೀ ಪ್ರಮಾಣದ ಕೊರತೆ ಮಳೆಯಿಂದಾಗಿ ಜನ ಬರದ ಸಂಕಷ್ಟಕ್ಕೆ ಸಿಲುಕಿತ್ತು. ಬೆಂಗಳೂರು (Bengaluru) ಮಾತ್ರವಲ್ಲದೆ ನಾಡಿನ ಹಲವಾರು ಭಾಗಗಳಲ್ಲಿ ಕುಡಿಯುವ ನೀರಿಗೆ (drinking water) ಹಾಹಾಕಾರವೆದ್ದಿದೆ. ಪ್ರಸಕ್ತ ಸಾಲಿನ ಮಳೆಗಾಲ ಶುರುವಾಗಲು ಇನ್ನೂ ಒಂದೂವರೆ ತಿಂಗಳು ಕಳೆಯಬೇಕು! ಜನರ ತೊಂದರೆ ಸಮಸ್ಯೆಗಳನ್ನು ಮತ್ತಷ್ಟು ಅಸಹನೀಯಗೊಳಿಸಿದ್ದು ಈ ಬಾರಿಯ ರಣಬಿಸಿಲು. ಇದನ್ನೆಲ್ಲ ಯಾಕೆ ಹೇಳುತ್ತಿದ್ದೇವೆ ಅಂದರೆ ಜಿಲ್ಲೆಯ ಕೆಜಿಎಫ್ ನಲ್ಲಿ ಇಂದು ಮಧ್ಯಾಹ್ನ ಮಳೆಯಾಗಿದೆ. ಕೋಲಾರ ಜಿಲ್ಲೆಯಲ್ಲಿ ಬೇಸಿಗೆ ಭಯಂಕರವಾಗಿರುತ್ತದೆ. ಸದ್ಯ ಲೋಕಸಭಾ ಚುನಾವಣೆಗಾಗಿ ಅಲ್ಲಿ ಮತದಾನ ಏಪ್ರಿಲ್ 26 ರಂದೇ ಮುಗಿದಿದೆ. ಬಿಸಿಲು ಮತ್ತು ಧಗೆಯಿಂದ ಕಂಗೆಟ್ಟಿದ್ದ ಕೆಜಿಎಫ್ ಜನಕ್ಕೆ ಇವತ್ತು ಸುರಿದ ಮಳೆ ಕೊಂಚ ನಿರಾಳತೆಯನ್ನು ಮೂಡಿಸಿದೆ. ಸುಡು ಬಿಸಿಲಿನಿಂದ ರಕ್ಷಣೆ ಪಡೆಯಲು ಕೊಡೆಗಳನ್ನು ಹಿಡಿದು ಮನೆಯಿಂದ ಹೊರಬಿದ್ದಿದ್ದ ಜನ ಮಳೆಯಿಂದ ನೆನೆಯದಿರಲು ಅವುಗಳನ್ನು ಬಳಸಿದರು! ನಮಗೆಲ್ಲ ಗೊತ್ತಿರುವಂತೆ ಕಳೆದೆರಡು ವಾರಗಳಿಂದ ರಾಜ್ಯದ ನಾನಾ ಭಾಗಗಳಲ್ಲಿ ಮಳೆಯಾಗುತ್ತಿದೆ. ಅದರೆ ಎಲ್ಲೆಡೆ ಸಾಧಾರಣ ಪ್ರಮಾಣದ ಮಳೆಗಳು ಅನ್ನೋದು ಸಮಾಧಾನ ಮೂಡಿಸದ ಅಂಶ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Karnataka Rain: ಕರ್ನಾಟಕದ 11ಕ್ಕೂ ಅಧಿಕ ಜಿಲ್ಲೆಗಳಲ್ಲಿ ಏಪ್ರಿಲ್ 29ರಿಂದ 3 ದಿನ ಮಳೆ, ಯೆಲ್ಲೋ ಅಲರ್ಟ್​