ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಅವೈಜ್ಞಾನಿಕ ಕಾಮಗಾರಿಯಿಂನದ ಚೆಂಡಿಯಾ ಗ್ರಾಮದ ಮನೆಗಳು ಜಲಾವೃತ
ಹೆದ್ದಾರಿ ಕಾಮಗಾರಿ ನಡೆಸುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ತಜ್ಞರು, ಪರಿಣಿತರು ಇಲ್ಲವೇ ಎಂಬ ಪ್ರಶ್ನೆ ಮೂಡೋದು ಸಹಜ. ಯಾಕೆಂದರೆ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಸಹ ಹಲವಾರು ಸಮಸ್ಯೆಗಳನ್ನು ವಾಹನ ಸವಾರರಿಗೆ ಸೃಷ್ಟಿಸಿದೆ. ಈ ಹೆದ್ದಾರಿಯನ್ನೂ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದು ಜನರೆಲ್ಲ ಆಡಿಕೊಳ್ಳುತ್ತಿದ್ದಾರೆ.
ಕಾರವಾರ: ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಪ್ರತಾಪ ಮುಂದುವರಿದಿದೆ. ಈ ಪ್ರದೇಶದ ಎಲ್ಲ ನದಿಗಳು, ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿರುವುದರಿಂದ ನೀರು ತಗ್ಗುಪ್ರದೇಶಗಳಿಗೆ ಹರಿದು ಸಾಮಾನ್ಯ ಜನಜೀವನದ ಮೇಲೆ ಪರಿಣಾಮ ಬೀರಿದೆ. ಕಾರವಾರ ತಾಲ್ಲೂಕಿನಲ್ಲಿರುವ ಚೆಂಡಿಯಾ ಗ್ರಾಮದ ನಾಲ್ಕು ಮನೆಗಳು ಜಲಾವೃತಗೊಂಡಿವೆ. ಮನೆಗಳ ಸುತ್ತ ಮೊಣಕಾಲು ಮಟ್ಟ ನೀರು ನಿಂತಿದೆ. ಮನೆಗಳಲ್ಲಿರುವ ಜನ ಹೊರಬರುವಂತಿಲ್ಲ ಮತ್ತು ಹೊರಗಿನವರರು ಸಹ ಈ ಮನೆಗಳನ್ನು ತಲುಪುವಂತಿಲ್ಲ. ಸ್ಥಳೀಯರು ಹೇಳುವ ಪ್ರಕಾರ ಹೆದ್ದಾರಿಗಾಗಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಯಿಂದ ಇಂಥ ಅನಾಹುತಗಳಾಗುತ್ತಿವೆ. ನಾವೆಲ್ಲ ಗಮನಿಸುತ್ತಿರುವಂತೆ ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ಈ ಭಾಗಗಳ ಜನರಿಗೆ ಸಮಸ್ಯೆ ಸೃಷ್ಟಿಸುತ್ತಿದೆ. ಕೆಲವೆಡೆ ಗುಡ್ಡ ಕುಸಿತ ಉಂಟಾಗುತ್ತಿರುವುದು ಸಹ ಅವೈಜ್ಞಾನಿಕವಾಗಿ ನಡೆಸುತ್ತಿರುವ ಕಾಮಗಾರಿಯಿಂದ ಎಂದು ಗೊತ್ತಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿದ್ದಾಳೆ ನೇತ್ರಾವತಿ, ನದಿಪಾತ್ರದ ಜನ ಎಚ್ಚರವಹಿಸುವಂತೆ ಜಿಲ್ಲಾಡಳಿತ ಸೂಚನೆ