ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಲ್ಲಿ ಸತತ ಮಳೆಯಿಂದ ಜನಜೀವನ ಅಸ್ತವ್ಯಸ್ತ, ಅದರೆ ರೈತರಲ್ಲಿ ಸಂತಸ!
ಶಾಲಾ ಕಾಲೇಜುಗಳಿಗೆ ಹೋದ ಮಕ್ಕಳು, ಕೋರ್ಟ್-ಕಚೇರಿಗಳಿಗೆ ಹೋದ ಜನ ತಮ್ಮೊಂದಿಗೆ ಕೊಡೆ ಅಥವಾ ಮಳೆಯಿಂದ ರಕ್ಷಣೆ ಪಡೆಯಲು ಯಾವುದಾದರೂ ಸಾಧನ ತೆಗೆದುಕೊಂಡು ಹೋಗಿದ್ದರೆ ಬಚಾವು, ಇಲ್ಲದ್ದಿದ್ದರೆ ದೃಶ್ಯಗಳಲ್ಲಿ ಕಾಣುತ್ತಿರುವ ಜನರ ಹಾಗೆ ಪರದಾಡಬೇಕಾಗುತ್ತದೆ. ಅದೇನೆ ಇರಲಿ, ಸುರಿಯಲಾರಂಭಿಸಿರುವ ಮಳೆ ರೈತ ಸಮುದಾಯಕ್ಕೆ ಅತೀವ ಸಂತಸವನನಂತೂ ಉಂಟು ಮಾಡಿದೆ.
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ (Hubballi Dharwad twin cities) ನಿನ್ನೆಯಿಂದ ಬಿಟ್ಟೂಬಿಡದೆ ಮಳೆಯಾಗುತ್ತಿದೆ. ಬೆಂಗಳೂರಲ್ಲಿ (Bengaluru) ಇಂದು ಬೆಳಗ್ಗೆಯಿಂದ ಮೋಡ ಕವಿದ (overcast) ವಾತಾವರಣವಿದೆ ಮತ್ತು ಬೆಳಗಿನ ಸಮಯ ನಗರದ ಹಲವು ಭಾಗಗಳಲ್ಲಿ ಮಳೆ ಕೂಡ ಆಯಿತು. ರಾಜಧಾನಿಯಲ್ಲಿದ್ದಂಥ ವಾತಾವರಣ ರಾಜ್ಯದ ಬೇರೆ ಜಿಲ್ಲೆಗಳಲ್ಲೂ ಇದೆ. ಇದರರ್ಥ ಮಳೆಗಾಲ ಬೇಗ ಶುರುವಾಗಿದೆ ಅನ್ನಬಹುದೇ? ಹಲವಾರು ಜಿಲ್ಲೆಗಳಲ್ಲಿ ಮಳೆಯಾಗಿರುವ ಬಗ್ಗೆ ವರದಿಗಳು ಬಂದಿವೆ. ನಮ್ಮ ನೆರೆ ರಾಜ್ಯ ತೆಲಂಗಾಣದ ರಾಜಧಾನಿ ಹೈದರಾಬಾದ್ ನಲ್ಲೂ ನಿನ್ನೆ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ. ಹುಬ್ಳಳ್ಳಿಯಲ್ಲಿ ಈಗ ಸುರಿಯತ್ತಿರುವುದು ಜೋರು ಮಳೆಯಲ್ಲ, ಜಡಿ ಮಳೆಯೂ ಅಲ್ಲ. ಜನರ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯನ್ನುಂಟು ಮಾಡುವ ಮಳೆ. ಶಾಲಾ ಕಾಲೇಜುಗಳಿಗೆ ಹೋದ ಮಕ್ಕಳು, ಕೋರ್ಟ್-ಕಚೇರಿಗಳಿಗೆ ಹೋದ ಜನ ತಮ್ಮೊಂದಿಗೆ ಕೊಡೆ ಅಥವಾ ಮಳೆಯಿಂದ ರಕ್ಷಣೆ ಪಡೆಯಲು ಯಾವುದಾದರೂ ಸಾಧನ ತೆಗೆದುಕೊಂಡು ಹೋಗಿದ್ದರೆ ಬಚಾವು, ಇಲ್ಲದ್ದಿದ್ದರೆ ದೃಶ್ಯಗಳಲ್ಲಿ ಕಾಣುತ್ತಿರುವ ಜನರ ಹಾಗೆ ಪರದಾಡಬೇಕಾಗುತ್ತದೆ. ಅದೇನೆ ಇರಲಿ, ಸುರಿಯಲಾರಂಭಿಸಿರುವ ಮಳೆ ರೈತ ಸಮುದಾಯಕ್ಕೆ ಅತೀವ ಸಂತಸವನನಂತೂ ಉಂಟು ಮಾಡಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವರ್ಷದ ಮೊದಲ ಮಳೆಗೆ ಬಂಡೀಪುರ ಫುಲ್ ಗ್ರೀನ್; ಕೆರೆ ಕಟ್ಟೆಗಳು ಭರ್ತಿ, ವನ್ಯ ಪ್ರಾಣಿಗಳು ಖುಷ್