ಪತ್ರಿಕಾ ಗೋಷ್ಟಿಯಲ್ಲಿದ್ದ ಅಂಜಲಿ ತಂಗಿ ಯಶೋಧಗೆ ಶಾಸಕ ವಿನಯ್ ಕುಲಕರ್ಣಿ ಫೋನ್ ಮಾಡಿ ಸಾಂತ್ವನ ಹೇಳಿದರು
ಆಕೆಯ ಸುತ್ತಮುತ್ತ ಇದ್ದ ಜನ ಹಾಗೆ ಹೇಳು, ಅದನ್ನು ಹೇಳು, ಇದನ್ನು ಕೇಳು ಅನ್ನುತ್ತಾ ಗೊಂದಲಕ್ಕೆ ದೂಡಿದ್ದರು, ಏನು ಮಾತಾಡಬೇಕೆನ್ನುವುದೇ ಆಕೆಗೆ ಗೊತ್ತಾಗಲಿಲ್ಲ. ತಮ್ಮ ಕಣ್ಣೆದಿರು ನಡೆದ ಅಂಜಲಿಯ ಘೋರ ಹತ್ಯೆಯಿಂದ ಇನ್ನೂ ಚೇತರಿಸಿಕೊಳ್ಳದ ಅಜ್ಜಿ ಮೌನವಾಗಿ ಶೂನ್ಯ ದೃಷ್ಟಿ ಬೀರುತ್ತಿದ್ದರು. ಕೊನೆಗೆ ಯಶೋಧ, ಸಾರ್ ನಮ್ಮಕ್ಕನ ಸಾವಿಗೆ ನ್ಯಾಯ ದೊರಕಿಸಿ ಕೊಡ್ರೀ ಅಷ್ಟು ಸಾಕು ಎಂದಳು. ಆ ಕಡೆಯಿಂದ ವಿನಯ್ ಕುಲಕರ್ಣಿ ಸಕಾರಾತ್ಮಕಾವಾಗಿ ಪ್ರತಿಕ್ರಿಯಿಸಿದರು.
ಹುಬ್ಬಳ್ಳಿ: ಮೊನ್ನೆ ಹತ್ಯೆಯಾದ ಅಂಜಲಿ ಅಂಬಿಗೇರ (Anjali Ambiger) ಸಹೋದರಿ ಯಶೋಧ (Yashoda) ತನ್ನ ಅಜ್ಜಿ ಮತ್ತು ಹುಬ್ಬಳ್ಳಿ-ದಾರವಾಡ ಮಹಾನಗರ ಪಾಲಿಕೆ ಕಾರ್ಪೋರೇಟರ್ ನಿರಂಜನ ಹಿರೇಮಠ (Niranjan Hiremath ) ಹಾಗೂ ಸ್ವಾಮೀಜಿಯೊಬ್ಬರೊಂದಿಗೆ ಪತ್ರಿಕಾ ಗೋಷ್ಟಿಯೊಂದರಲ್ಲಿ ಭಾಗಿಯಾಗಿದ್ದಾಗ, ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಆಕೆಯೊಂದಿಗೆ ಮಾತಾಡಿ ಧೈರ್ಯ ಹೇಳಿದರು. ನಿರಂಜನ ಹೇಳುವ ಪ್ರಕಾರ ಪತ್ರಿಕಾ ಗೋಷ್ಟಿಗೆ ಮೊದಲು ಯಶೋಧ ಅಜ್ಜಿಯೊಂದಿಗೆ ಆಸ್ಪತ್ರೆಗೆ ಹೋಗಿದ್ದಾಗಲೇ ವಿನಯ್ ಮಾಡಿದ್ದರಂತೆ. ಯಶೋಧ, ಶಾಸಕನೊಂದಿಗೆ ಮಾತಾಡುವಾಗ ನಿರಂಜನ್ ಸೇರಿದಂತೆ ಆಕೆಯ ಸುತ್ತಮುತ್ತ ಇದ್ದ ಜನ ಹಾಗೆ ಹೇಳು, ಅದನ್ನು ಹೇಳು, ಇದನ್ನು ಕೇಳು ಅನ್ನುತ್ತಾ ಗೊಂದಲಕ್ಕೆ ದೂಡಿದ್ದರು, ಏನು ಮಾತಾಡಬೇಕೆನ್ನುವುದೇ ಆಕೆಗೆ ಗೊತ್ತಾಗಲಿಲ್ಲ. ತಮ್ಮ ಕಣ್ಣೆದಿರು ನಡೆದ ಅಂಜಲಿಯ ಘೋರ ಹತ್ಯೆಯಿಂದ ಇನ್ನೂ ಚೇತರಿಸಿಕೊಳ್ಳದ ಅಜ್ಜಿ ಮೌನವಾಗಿ ಶೂನ್ಯ ದೃಷ್ಟಿ ಬೀರುತ್ತಿದ್ದರು. ಕೊನೆಗೆ ಯಶೋಧ, ಸಾರ್ ನಮ್ಮಕ್ಕನ ಸಾವಿಗೆ ನ್ಯಾಯ ದೊರಕಿಸಿ ಕೊಡ್ರೀ ಅಷ್ಟು ಸಾಕು ಎಂದಳು. ಆ ಕಡೆಯಿಂದ ವಿನಯ್ ಕುಲಕರ್ಣಿ ಸಕಾರಾತ್ಮಕಾವಾಗಿ ಪ್ರತಿಕ್ರಿಯಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸರ್ಕಾರ ಸತ್ತಿದೆಯೋ ಬದುಕಿದೆಯೋ? ನೇಹಾ, ಅಂಜಲಿಗೆ ಕೊಲೆಗೆ ಸರ್ಕಾರವೇ ನೇರ ಹೊಣೆ: ಬಿಜೆಪಿ ಎಂಎಲ್ಸಿ ರವಿಕುಮಾರ್ ವಾಗ್ದಾಳಿ