Rains in Bengaluru: ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ, ಮಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ವ್ಯಕ್ತಿ ಅಯತಪ್ಪಿ ಬಿದ್ದರು!

Edited By:

Updated on: Oct 20, 2022 | 11:08 AM

ಶಿವಾನಂದ ಸರ್ಕಲ್ ನಲ್ಲಿ ಮಗಳನ್ನು ಶಾಲೆಗೆ ಬಿಟ್ಟುಬರಲು ಹೋಗುತ್ತಿದ್ದ ವ್ಯಕ್ತಿಯೊಬ್ಬರು ನೀರಿನ ರಭಸಕ್ಕೆ ಆಯತಪ್ಪಿ ಜಲಾವೃತ ರೋಡಿಗೆ ಬೀಳುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು

ಬೆಂಗಳೂರು: ಕಳೆದ ರಾತ್ರಿ ಬೆಂಗಳೂರಲ್ಲಿ ಮತ್ತೊಮ್ಮೆ ಕುಂಭದ್ರೋಣ, ನಗರದ ಎಲ್ಲ ರಸ್ತೆಗಳು ಜಲಾವೃತ ಅಂತ ಹೇಳಿದರೆ ಅದು ಅಂಡರ್ ಸ್ಟೇಟ್ ಮೆಂಟ್ ಎನಿಸಿಕೊಳ್ಳುತ್ತದೆ. ಯಾಕೆಂದರೆ ಮಳೆ ನೀರು ಪ್ರವಾಹೋಪಾದಿಯಲ್ಲಿ ನೀರು ರಸ್ತೆಗಳ ಮೇಲೆ ಭೋರ್ಗರೆಯುತಿತ್ತು. ಶಿವಾನಂದ ಸರ್ಕಲ್ ನಲ್ಲಿ ಮಗಳನ್ನು ಶಾಲೆಗೆ ಬಿಟ್ಟುಬರಲು ಹೋಗುತ್ತಿದ್ದ ವ್ಯಕ್ತಿಯೊಬ್ಬರು ನೀರಿನ ರಭಸಕ್ಕೆ ಆಯತಪ್ಪಿ ಜಲಾವೃತ ರೋಡಿಗೆ ಬೀಳುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಅವರ ಹಿಂದೆಯೇ ಕಾರಲ್ಲಿದ್ದ ಟಿವಿ9 ವರದಿಗಾರ ಮತ್ತು ಕೆಮೆರಾಮನ್ ಅವರ ನೆರವಿಗೆ ಧಾವಿಸಿದರು.