ಬೆಂಗಳೂರಲ್ಲಿ ಪುನಃ ಬೆಳ್ಳಂಬೆಳಗ್ಗೆಯೇ ಸುರಿಯಲಾರಂಭಿಸಿದ ಮಳೆ, ಆಫೀಸುಗಳಿಗೆ ಹೊಗೋರು ಕಂಗಾಲು

Updated on: May 20, 2025 | 10:12 AM

ರವಿವಾರದವರೆಗೆ ಬೆಂಗಳೂರು, ನಗರದ ಸುತ್ತಮುತ್ತಲ ಪ್ರದೇಶ ಮತ್ತು ರಾಜ್ಯದ ಆರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಚೇರಿಗಳ ಟೈಮು ನಿಗದಿಯಾಗಿರುವಂತೆ ಪರಮಾತ್ಮ ಮಳೆಗೂ ಸಮಯ ನಿಗದಿ ಮಾಡಿದ್ದರೆ ಚೆನ್ನಾಗಿತ್ತು. ಮಳೆ ಸುರಿಯುವ ಸಮಯ ನೋಡಿ ಜನ ಕೆಲಸಗಳನ್ನು ಶೆಡ್ಯೂಲ್ ಮಾಡಿಕೊಳ್ಳಬಹುದಿತ್ತು.

ಬೆಂಗಳೂರು, ಮೇ 20: ಆಗಸಕ್ಕೆ ಯಾರಾದರೂ ಕೊಡೆ ಹಿಡಿಯಬಾರದೇ? ಬೆಂಗಳೂರಿನ ಜನ ಆಡಿಕೊಳ್ಳುತ್ತಿರುವ ಮಾತಿದು. ಅದರಲ್ಲೂ ಕೆಲಸಕ್ಕೆ ಅಂತ ಕಚೇರಿಗಳಿಗೆ ಹೋಗುವವರು ಇಂದು ಬೆಳ್ಳಂಬೆಳಗ್ಗೆಯೇ ಸುರಿಯಲು ಶುರುವಾದ ಮಳೆಗೆ ಹಿಡಿಶಾಪ ಹಾಕುತ್ತಿದ್ದಾರೆ. ನಗರದ ಅತ್ಯಂತ ಬ್ಯೂಸಿ ಬಸ್​ಸ್ಟಾಪ್​ಗಳಲ್ಲಿ ಒಂದಾಗಿರುವ ಕಾಪೋರೇಷನ್ ಸರ್ಕಲ್ (Corporation Circle) ಬಳಿ ನೆರೆದಿರುವವರು, ಬಸ್​ಗಳಿಂದ ಇಳಿಯುತ್ತಿರುವವರು, ಅಸಹಾಯಕತೆಯಿಂದ ದಯೆತೋರದ ಆಗಸದ ಕಡೆ ನೋಡುತ್ತಿರುವವರು-ಎಲ್ಲ ಆಫೀಸುಗಳಿಗೆ ಹೋಗಬೇಕಾದ ಜನ. ಬೈಕ್​ಗಳಲ್ಲಿ ಹೋಗುತ್ತಿದ್ದವರು ಮಳೆ ಹೆಚ್ಚಾದ ಕಾರಣ ಬಸ್ ಸ್ಟಾಪ್ ಬಳಿ ವಾಹನಗಳನ್ನು ನಿಲ್ಲಿಸಿ ನಿಲ್ದಾಣದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಇದನ್ನೂ ಓದಿ:  Bengaluru Rains: ಭಾರಿ ಮಳೆಗೆ ಬೆಂಗಳೂರು ಹೈರಾಣ, ಮನೆಗಳಿಗೆ ನುಗ್ಗಿದ ರಾಜಕಾಲುವೆ ನೀರು, ಹಲವೆಡೆ ಸಂಚಾರಕ್ಕೆ ಅಡಚಣೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ