ಸಿನಿಮೋತ್ಸವದ ಬಗ್ಗೆ ಗೌರವ ಇಲ್ಲದವರು ಅದನ್ನು ಉತ್ಸವ ಆಗಿ ಆಚರಿಸಲು ಹೇಗೆ ಸಾಧ್ಯ? ರಾಜ್ ಬಿ. ಶೆಟ್ಟಿ ಪ್ರಶ್ನೆ
‘ಪೆದ್ರೊ’ ಸಿನಿಮಾ ವಿದೇಶಗಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಗೆದ್ದಿದೆ. ಆದರೆ, ನಮ್ಮದೇ ನೆಲದಲ್ಲಿ ನಡೆಯುತ್ತಿರುವ ಸಿನಿಮೋತ್ಸವದಲ್ಲಿ ಕನ್ನಡ ಚಿತ್ರಕ್ಕೆ ಅವಕಾಶ ಸಿಕ್ಕಿಲ್ಲ ಅನ್ನೋದು ಬೇಸರದ ಸಂಗತಿ.
ಈ ಬಾರಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ವಿವಾದಕ್ಕೆ ಗುರಿಯಾಗಿದೆ. ನಟೇಶ್ ಹೆಗಡೆ ನಿರ್ದೇಶನದ ‘ಪೆದ್ರೊ’ ಸಿನಿಮಾವನ್ನು (Pedro Movie) ರಿಷಬ್ ಶೆಟ್ಟಿ (Rishab Shetty)ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ವಿದೇಶಗಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಗೆದ್ದಿದೆ. ಆದರೆ, ನಮ್ಮದೇ ನೆಲದಲ್ಲಿ ನಡೆಯುತ್ತಿರುವ ಸಿನಿಮೋತ್ಸವದಲ್ಲಿ ಕನ್ನಡ ಚಿತ್ರಕ್ಕೆ ಅವಕಾಶ ಸಿಕ್ಕಿಲ್ಲ ಅನ್ನೋದು ಬೇಸರದ ಸಂಗತಿ. ಈ ಬಗ್ಗೆ ರಾಜ್ ಬಿ ಶೆಟ್ಟಿ (Raj B Shetty) ಮಾತನಾಡಿದ್ದಾರೆ. ‘ಇದೊಂದು ಮಿಸ್ಟ್ರಿ. ನಮ್ಮ ತಂಡದವರು ಕಾರಣ ಕೇಳಿದಾಗ ಜ್ಯೂರಿ ಅವರ ಹೆಸರನ್ನು ತೆಗೆದುಕೊಂಡರು. ಪ್ರೆಸ್ ಅವರು ಕೇಳಿದಾಗ ಧಾರ್ಮಿಕ ಭಾವನೆಗೆ ಧಕ್ಕೆ ತರ್ತಿದೆ ಈ ಸಿನಿಮಾ ಎಂದರು. ಒಂದು ಸಿನಿಮಾ ಸೆಲೆಕ್ಟ್ ಆಗದೇ ಇದ್ದರೆ ಏನೂ ಆಗುವುದಿಲ್ಲ ಎಂದು ಚಿತ್ರೋತ್ಸವ ನಡೆಸುವವರು ಹೇಳುತ್ತಾರೆ ಸಿನಿಮೋತ್ಸವದ ಬಗ್ಗೆ ಗೌರವ ಇಲ್ಲದವರು ಅದನ್ನು ಉತ್ಸವ ಆಗಿ ಆಚರಿಸಲು ಹೇಗೆ ಸಾಧ್ಯ’ ಎಂದು ರಾಜ್ ಬಿ. ಶೆಟ್ಟಿ ಪ್ರಶ್ನೆ ಮಾಡಿದರು.
ಇದನ್ನೂ ಓದಿ: Hombale Films: ಹೊಂಬಾಳೆ ಫಿಲ್ಮ್ಸ್ನ 11ನೇ ಚಿತ್ರ ಕಾಂತಾರ; ನಿರ್ದೇಶಕ ಮತ್ತು ನಾಯಕನಾಗಿ ರಿಷಬ್ ಶೆಟ್ಟಿ
Shiva Rajkumar: ಶಿವರಾಜ್ ಕುಮಾರ್ 126ನೇ ಚಿತ್ರಕ್ಕೆ ರಿಷಬ್ ಶೆಟ್ಟಿ ನಿರ್ದೇಶನ ಖಚಿತ; ಯಾವಾಗ ಸೆಟ್ಟೇರಲಿದೆ ಸಿನಿಮಾ?